ADVERTISEMENT

ಮುಳ್ಳಯ್ಯನಗಿರಿಯಲ್ಲಿ ಆರ್ಭಟಿಸಿದ ಮಳೆ

​ಪ್ರಜಾವಾಣಿ ವಾರ್ತೆ
Published 13 ಮೇ 2025, 16:29 IST
Last Updated 13 ಮೇ 2025, 16:29 IST
ಚಿಕ್ಕಮಗಳೂರಿನಲ್ಲಿ ಸುರಿದ ಮಳೆಯ ನಡುವೆ ವಿದ್ಯಾರ್ಥಿಗಳು ಕೊಡೆ ಹಿಡಿದು ಸಾಗಿದರು
ಚಿಕ್ಕಮಗಳೂರಿನಲ್ಲಿ ಸುರಿದ ಮಳೆಯ ನಡುವೆ ವಿದ್ಯಾರ್ಥಿಗಳು ಕೊಡೆ ಹಿಡಿದು ಸಾಗಿದರು   

ಚಿಕ್ಕಮಗಳೂರು: ಮುಳ್ಳಯ್ಯನಗಿರಿ ಸೇರಿದಂತೆ ನಗರದ ಹಲವೆಡೆ ಮಂಗಳವಾರ ಸಂಜೆ ಬೋರ್ಗರೆದು ಮಳೆ ಸುರಿಯಿತು.

ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಬಾಬಾಬುಡನ್‌ಗಿರಿ, ಗಾಳಿಕೆರೆ, ಅತ್ತಿಗುಂಡಿ, ಮಹಲ್, ಕೊಳಗಾಮೆ, ಜಾಗರ ಸುತ್ತಮುತ್ತ ಸುಮಾರು ಎರಡು ಗಂಟೆ ಮಳೆ ಸುರಿದಿದ್ದು, ರಸ್ತೆಗಳಲ್ಲಿ ನೀರು ಹರಿಯಿತು. ಹೊನ್ನಮ್ಮನಹಳ್ಳ ಜಲಪಾತದಲ್ಲಿ ನೀರಿನ ಹರಿವು ಹೆಚ್ಚಾಗಿತ್ತು.

ನಗರದಲ್ಲೂ ಗಂಟೆಗೂ ಹೆಚ್ಚು ಕಾಲ ಮಳೆ ಆರ್ಭಟಿಸಿತು. ಜೋರು ಗಾಳಿ, ಗುಡುಗು ಸಹಿತ ಸುರಿದ ಮಳೆಗೆ ಕೆಲಕಾಲ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಬಸವನಹಳ್ಳಿ, ಕೆಂಪನಹಳ್ಳಿ ಹೌಸಿಂಗ್ ಬೋರ್ಡ್ ಭಾಗದಲ್ಲಿ ಮಳೆ ಜೋರಾಗಿತ್ತು. ಮಳೆಯ ನೀರು ರಸ್ತೆಗಳಲ್ಲಿ ಹರಿಯಿತು.

ADVERTISEMENT
ಚಿಕ್ಕಮಗಳೂರಿನಲ್ಲಿ ಸೋಮವಾರ ಸಂಜೆ ಸುರಿದ ಮಳೆಯ ನಡುವೆ ಜನ ಕೊಡೆ ಹಿಡಿದು ಸಂಚರಿಸಿದರು
ಮುಳ್ಳಯ್ಯನಗಿರಿ ಭಾಗದ ಅತ್ತಿಗುಂಡಿಯಲ್ಲಿ ರಸ್ತೆಯಲ್ಲಿ ಮಳೆ ನೀರು ನಿಂತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.