ADVERTISEMENT

ಶೃಂಗೇರಿಯಲ್ಲಿ ಎಡಬಿಡದ ಮಳೆ: ಉಕ್ಕಿ ಹರಿದ ತುಂಗಾನದಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 15:32 IST
Last Updated 2 ಜುಲೈ 2025, 15:32 IST
ಶೃಂಗೇರಿಯಲ್ಲಿ ಮಳೆಯಿಂದ ಬುಧವಾರ ತುಂಗಾ ನದಿಯ ನೀರಿನ ಮಟ್ಟ ಎರಿಕೆಯಾಗಿದೆ
ಶೃಂಗೇರಿಯಲ್ಲಿ ಮಳೆಯಿಂದ ಬುಧವಾರ ತುಂಗಾ ನದಿಯ ನೀರಿನ ಮಟ್ಟ ಎರಿಕೆಯಾಗಿದೆ   

ಶೃಂಗೇರಿ: ತಾಲ್ಲೂಕಿನಾದ್ಯಾಂತ ಮಳೆಯ ಆರ್ಭಟ ಬುಧವಾರ ಜೋರಾಗಿದೆ.

ತಾಲ್ಲೂಕಿನ ಕಿಗ್ಗಾದಲ್ಲಿ 87.6 ಮಿ.ಮೀ, ಶೃಂಗೇರಿಯಲ್ಲಿ 53.2 ಮಿ.ಮೀ, ಕೆರೆಕಟ್ಟೆ 111 ಮಿ.ಮೀ ಮತ್ತು ಇದುವರೆಗೂ ಒಟ್ಟು 1,901 ಮಿ.ಮೀ ಮಳೆಯಾಗಿದೆ.

ಮಂಗಳವಾರ ರಾತ್ರಿಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತಾಲ್ಲೂಕಿನಲ್ಲಿರುವ ಹಳ್ಳ–ಕೊಳ್ಳಗಳು, ನದಿಗಳು ತುಂಬಿ ಹರಿಯುತ್ತಿವೆ. ತಗ್ಗು ಪ್ರದೇಶದ ಭತ್ತದ ಗದ್ದೆಗಳು, ತೋಟಗಳು ನೀರಿನಿಂದ ಆವೃತಗೊಂಡಿದೆ.

ADVERTISEMENT

ತುಂಗಾ ನದಿಯ ನೀರಿನ ಮಟ್ಟ ರಾತ್ರಿ ವೇಳೆ ಏರಿಕೆಯಾಗಿ ಭಾರತೀತೀರ್ಥ ರಸ್ತೆಗೆ ಬರುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.