ಮೂಡಿಗೆರೆ: ಕಾವೇರಿಯ ಪ್ರಮುಖ ಉಪ ನದಿಯಾದ ಹೇಮಾವತಿ ನದಿ ಪಾತ್ರದ ರಕ್ಷಣೆಗೆ ವಿಶೇಷ ಯೋಜನೆ ರೂಪಿಸಬೇಕು ಎಂದು ಹೇಮಾವತಿ ನದಿ ಹಿತರಕ್ಷಣಾ ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಬಾಳೂರು ಹೇಳಿದರು.
ತಾಲ್ಲೂಕಿನ ಜಾವಳಿ ಗ್ರಾಮದ ಹೇಮಾವತಿ ನದಿ ಉಗಮ ಸ್ಥಾನದಲ್ಲಿ ಮಂಗಳವಾರ ಹೇಮಾವತಿ ನದಿ ಹಿತರಕ್ಷಣಾ ಒಕ್ಕೂಟದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ತಮ್ಮ ನದಿಗೆ ಬಾಗಿನ ಸಮರ್ಪಿಸಿದ ಬಳಿಕ ಅವರು ಮಾತನಾಡಿದರು.
‘ಹೇಮಾವತಿ ನದಿಯು ಚಿಕ್ಕಮಗಳೂರು, ಹಾಸನ ಜಿಲ್ಲೆಯ ರೈತರ ಜೀವನಾಡಿಯಾಗಿದೆ. ನದಿಮೂಲ ಹಾಗೂ ನದಿಪಾತ್ರದ ಸಂರಕ್ಷಣೆಯು ನಮ್ಮೆಲ್ಲರ ಹೊಣೆಯಾಗಿದ್ದು, ನದಿಉಳಿವಿಗೆ ಧಕ್ಕೆಯಾಗದಂತೆ ಕಾಪಾಡಿಕೊಳ್ಳಬೇಕಿದ’ ಎಂದರು.
ಕಾರ್ಯಕ್ರಮದ ಅಂಗವಾಗಿ ನದಿ ಉಗಮ ಸ್ಥಾನದಲ್ಲಿರುವ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಪಾವನಬಾಲಕೃಷ್ಣ, ಎಂ.ವಿ ಜಗದೀಶ್ ಮೇಗೂರು, ಗೃಹ ಮಂಡಳಿ ಮಾಜಿ ಅಧ್ಯಕ್ಷ ಹಾಲಪ್ಪ ಗೌಡ, ಟಿ.ಪಿ.ಸುರೇಂದ್ರ, ಶಶಿಧರ್ ಜಾವಳಿ, ಗಣಪತಿ ಆಚಾರ್, ಚೆನ್ನಕೇಶವಗೌಡ, ಸೋಮೇಶ್ ಮರ್ಕಲ್, ಕೂಡ್ಲಿ ರಾಜೇಂದ್ರ, ಪರೀಕ್ಷಿತ್ ಜಾವಳಿ, ರವಿ ಪಟೇಲ್, ಬಾಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮನೋಜ್, ಸುರೇಶ್ ಬಿ.ಎಂ, ಪೂರ್ಣೇಶ್ ಮೂರ್ತಿ, ಮೊಹಿದ್ದೀನ್ ಶೇಟ್, ಲಕ್ಷ್ಮಣ್ ಗೌಡ, ಸಂಜೀವ್ ಕೋಟ್ಯಾನ್, ಅರ್ಚಕ ಅವಿನಾಶ್ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.