
ಆಲ್ದೂರು: ಸಮೀಪದ ಹವ್ವಳ್ಳಿ ವಾರ್ಡಿನ ವಗರ್ ರಸ್ತೆ ಪ್ರದೇಶದ ನಿವೇಶನ ರಹಿತ ನಿವಾಸಿಗಳು ಮಂಗಳವಾರ ‘ನಮ್ಮ ಭೂಮಿ ನಮ್ಮ ತೋಟ’ ಯೋಜನೆಯ ಜಮೀನಿನಲ್ಲಿ ಗುಡಿಸಲು ಹಾಕಿ ನಿವೇಶನ ಒದಗಿಸುವಂತೆ ಒತ್ತಾಯಿಸಿದರು.
ಹಲವು ವರ್ಷಗಳಿಂದ ಗಾರೆ ಕೆಲಸ, ತೋಟದ ಕೆಲಸ ಸೇರಿದಂತೆ ವಿವಿಧ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ಬಾಡಿಗೆ ಮನೆಗಳಲ್ಲಿ ವಾಸವಿದ್ದು, ಸ್ವಂತ ಸೂರು ನಿರ್ಮಿಸಿಕೊಳ್ಳಲು ಅಗತ್ಯವಾದ ನಿವೇಶನವನ್ನು ಜನಪ್ರತಿನಿಧಿಗಳು ಒದಗಿಸಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಇತ್ತೀಚಿನ ದಿನಗಳಲ್ಲಿ ಅಸ್ಸಾಂ ಹಾಗೂ ಉತ್ತರ ಭಾರತದ ರಾಜ್ಯಗಳಿಂದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಬರುತ್ತಿರುವುದರಿಂದ ಬಾಡಿಗೆ ದರ ಹೆಚ್ಚಾಗಿದೆ. ದಿನಗೂಲಿ ಆದಾಯದಲ್ಲಿ ಮಕ್ಕಳ ವಿದ್ಯಾಭ್ಯಾಸ, ಸಾಲದ ಹೊರೆ ಸೇರಿದಂತೆ ಹಲವು ಸಮಸ್ಯೆಗಳ ನಡುವೆ ಬಾಡಿಗೆ ನಿರ್ವಹಿಸುವುದು ಕಷ್ಟವಾಗಿದೆ. ಸ್ವಂತ ಮನೆ ಕನಸಾಗಿಯೇ ಉಳಿದಿದೆ ಎಂದು ಹೇಳಿದರು.
ನಿವೇಶನ ರಹಿತರಾದ ಭರತ್, ಶರತ್, ಉಮೇಶ್, ಜಾಫರ್, ಚಂದ್ರ, ಕಮಲಮ್ಮ, ಗೌತಮಿ, ಮಂಜುಳಾ, ಹೇಮಾವತಿ, ಪುಷ್ಪ, ಜಯಮ್ಮ, ವಿಜಯ, ಇಂದ್ರ, ಸುಚಿತ್ರ, ಅರುಣ್, ಬಾಬು, ಮುಸ್ತಫ, ಕಣ್ಣ, ದಿಲೀಪ, ರಿಯಾಜ್, ನಾಗಪ್ಪ ಸೇರಿದಂತೆ ಹಲವರು ಅಧಿಕಾರಿಗಳು ಶೀಘ್ರವಾಗಿ ಹಕ್ಕುಪತ್ರ ವಿತರಿಸುವಂತೆ ಒತ್ತಾಯಿಸಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಿಜಯಕುಮಾರ್ ಮಾತನಾಡಿ, ‘ಪ್ರಸ್ತುತ ನಿವೇಶನ ರಹಿತರು 2007ರಲ್ಲಿ ಹವ್ವಳ್ಳಿ ವಾರ್ಡಿನ ಸರ್ವೆ ನಂ. 387ರಲ್ಲಿ 3 ಎಕರೆ 11 ಗುಂಟೆ ಹಾಗೂ ಸರ್ವೆ ನಂ. 187ರಲ್ಲಿ 1 ಎಕರೆ 11 ಗುಂಟೆ ಜಮೀನಿನಲ್ಲಿ ಗುಡಿಸಲು ಹಾಕಿಕೊಂಡಿದ್ದು, ಈ ಜಮೀನು ಪಹಣಿಯಲ್ಲಿ ಕಾರ್ಯದರ್ಶಿ ಹೆಸರಿನಲ್ಲಿ ಉಲ್ಲೇಖವಾಗಿದೆ. ಆದರೆ, ಕಂದಾಯ ಇಲಾಖೆ ಇನ್ನೂ ಆರ್‌ಡಿಪಿಆರ್ ಇಲಾಖೆಗೆ ಜಮೀನು ವರ್ಗಾವಣೆ ಮಾಡಿಲ್ಲ’ ಎಂದು ತಿಳಿಸಿದರು.
ಜಮೀನು ವರ್ಗಾವಣೆ ಆದ ಬಳಿಕ ಚುನಾವಣೆ ನಡೆದು ಹೊಸ ಪಂಚಾಯಿತಿ ಪ್ರತಿನಿಧಿಗಳು ಆಯ್ಕೆಯಾದ ನಂತರ, ಹದ್ದುಬಸ್ತು ಮಾಡಿ ಲೇಔಟ್ ನಿರ್ಮಿಸಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು ಎಂದರು.
ಇಷ್ಟೆಲ್ಲಾ ನಿಯಮಾವಳಿಗಳನ್ನು ಪಂಚಾಯತ್ ರಾಜ್ ಇಲಾಖೆ ನಿವೇಶನ ಹಂಚಿಕೆಯಲ್ಲಿ ನಿರ್ವಹಣೆ ಮಾಡಬೇಕಾಗಿರುವುದರಿಂದ ನಿವೇಶನ ರಹಿತರು, ಮಂಗಳವಾರ ಗುಡಿಸಲು ಹಾಕಿದ ಕೂಡಲೇ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಭೇಟಿ ನೀಡಿ ಮಾಹಿತಿ ಒದಗಿಸಲು ಸೂಚಿಸಿದ್ದೇವೆ. ಕಾನೂನು ಬಾಹಿರವಾಗಿ ಗುಡಿಸಲು ಹಾಕಿರುವ ನಿವೇಶನ ರಹಿತರನ್ನು ಗುರುವಾರ ಖುದ್ದಾಗಿ ಭೇಟಿ ಮಾಡಿ, ನಿವೇಶನ ಹಂಚಿಕೆಗೆ ಇರುವ ನಿಯಮಾವಳಿಗಳನ್ನು ತಿಳಿಸಲಾಗುವುದು ಎಂದು ಅವರು ತಿಳಿಸಿದರು.
ನಿವೇಶನ ರಹಿತರ ಪ್ರತಿಭಟನೆ
ಆಲ್ಲೂರು: ಗಾಳಿಗಂಡಿ ವಾರ್ಡಿನ ನೂರಾರು ನಿರಾಶ್ರಿತರು ಬುಧವಾರ ಬೆಳಿಗ್ಗೆ ನಿವೇಶನದ ಬೇಡಿಕೆ ಮುಂದಿಟ್ಟು, ಗುಡಿಸಲು ಹಾಕಿ ಪ್ರತಿಭಟನೆ ನಡೆಸಿದರು.
ಚಿಕ್ಕಮಾಗರವಳ್ಳಿ ಗ್ರಾಮದ ಸರ್ವೆ ನಂ.172ರ ಜಾಗದಲ್ಲಿ ನಿವೇಶನ ರಹಿತರು ಗುಡಿಸಲುಗಳನ್ನು ನಿರ್ಮಿಸಲು ಆರಂಭಿಸಿದ ಮಾಹಿತಿ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬಂದರು. ಈ ವೇಳೆ ಪ್ರತಿಭಟನಾಕಾರರು ಹಾಗೂ ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು.
ನಂತರ ಸ್ಥಳಕ್ಕೆ ಬಂದ ವಲಯ ಅರಣ್ಯ ಅಧಿಕಾರಿ ಹರೀಶ್, 'ಸರ್ವೆ ನಂ.172ರ ಸುಮಾರು 80 ಎಕರೆ ಪ್ರದೇಶ ಡೀಮ್ಸ್ ಅರಣ್ಯ ವ್ಯಾಪ್ತಿಗೆ ಸೇರಿದ್ದು, ಪಹಣಿಯಲ್ಲಿ 'ಅರಣ್ಯ ನೆಡುತೋಪು' ಎಂದು ದಾಖಲಾಗಿದೆ. ಇಲಾಖೆ ವ್ಯಾಪ್ತಿಯ ಜಾಗವಾದ್ದರಿಂದ ಗುಡಿಸಲುಗಳನ್ನು ತೆರವುಗೊಳಿಸಬೇ-ಕೆಂದು ಸೂಚಿಸಿದರು.
ನಿವೇಶನ ರಹಿತರ ಸಮಿತಿಯ ಕೃಷ್ಣಪ್ಪ ಹಾಗೂ ಶೇಖರ್ ಮಾತನಾಡಿ, 'ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ಭೂಮಾಲೀಕರನ್ನು ಪ್ರಶ್ನಿಸದೆ, ಹಲವು
ಅರಣ್ಯ ಭೂಮಿಯಲ್ಲಿ ನಿವೇಶನಕ್ಕಾಗಿ ಗುಡಿಸಲು ಹಾಕಿದ್ದ ನಿವೇಶನ ರಹಿತರೊಂದಿಗೆ ವಲಯ ಅರಣ್ಯಾಧಿಕಾರಿ ಹರೀಶ್ ಚರ್ಚಿಸಿದರು
ವರ್ಷಗಳಿಂದ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವ ಕೂಲಿ ಕಾರ್ಮಿಕರು ಸೂರು ಕಟ್ಟಲು ಮುಂದಾದರೆ ಅಕ್ರಮವೆಂದು ತಡೆಯುವುದು ಅನ್ಯಾಯ' ಎಂದು ಆಕ್ರೋಶ ವ್ಯಕ್ತಪಡಿ-ಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಹರೀಶ್. 'ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ ಡೀಮ್ಸ್ ಅರಣ್ಯ ವ್ಯಾಪ್ತಿಯ ಜಮೀನನ್ನು ಯಾವುದೇ ಕಾರಣಕ್ಕೂ ಬಳಸಲು ಅವಕಾಶವಿಲ್ಲ. ಈಗಾಗಲೇ ಒತ್ತುವರಿ ಮಾಡಿಕೊಂಡಿರುವ ಹಲವು ಕಾಫಿ
ತೋಟಗಳನ್ನು ತೆರವುಗೊಳಿಸಿರುವ ಉದಾಹರಣೆಗಳಿವೆ. ಗುಡಿಸಲು ತೆರವು-ಗೊಳಿಸದಿದ್ದರೆ ಪ್ರಕರಣ ದಾಖಲಿಸಲಾ ಗುವುದು' ಎಂದು ಎಚ್ಚರಿಸಿದರು.
ಅಧಿಕಾರಿಗಳ ಮನವಿಗೆ ಅನುಗುಣವಾಗಿ ನಿವೇಶನ ರಹಿತರು ಗುಡಿಸಲುಗಳನ್ನು ತೆರವುಗೊಳಿಸಿ ಸ್ಥಳದಿಂದ ತೆರಳಿದರು.
ಉಪ ಅಧಿಕಾರಿಗಳಾದ ಚಿದಾನಂದ ಹಾಗೂ ಪೊಲೀಸ್ ವಲಯ ಅರಣ್ಯ ಸಂದೀಪ್, ಇಲಾಖೆಯ ಪಿಎಸ್‌ಐಗಳಾದ ಮೂರ್ತಪ್ಪ, ರವಿಜಿಎ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.