ADVERTISEMENT

ವಿನಯತೆ, ಪ್ರೀತಿ, ಶಾಂತಿ, ಸೇವೆಯೇ ನಿಜವಾದ ಕ್ರಿಸ್‌ಮಸ್: ಫಾದರ್ ಮೆಲ್ವಿನ್ ಸಂದೇಶ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 6:37 IST
Last Updated 25 ಡಿಸೆಂಬರ್ 2025, 6:37 IST
ಫಾದರ್ ಮೆಲ್ವಿನ್ ಟೆಲ್ಲಿಸ್
ಫಾದರ್ ಮೆಲ್ವಿನ್ ಟೆಲ್ಲಿಸ್   

ನಾವು ಕ್ರಿಸ್‌ಮಸ್ ಎಂಬ ಪದ ಕೇಳುತ್ತಿದ್ದಂತೆ ಮನಸ್ಸಿಗೆ ಅನೇಕ ಚಿತ್ರಗಳು ಬರುತ್ತವೆ. ದೀಪಾಲಂಕಾರ, ಸಂತಕ್ಲಾಸ್, ಅಲಂಕಾರಗಳು, ಸಿಹಿ ತಿಂಡಿಗಳು, ಉಡುಗೊರೆಗಳು ಮತ್ತು ಸಂಭ್ರಮಾಚರಣೆ. ಇವೆಲ್ಲವೂ ಸುಂದರ. ಆದರೆ, ನಿಜವಾದ ಕ್ರಿಸ್‌ಮಸ್ ಹೊರಗಿನ ಆನಂದಕ್ಕಿಂತ ಆಳವಾದ ಅರ್ಥವನ್ನು ಹೊಂದಿದೆ. ನಿಜವಾದ ಕ್ರಿಸ್‌ಮಸ್ ಮಾರುಕಟ್ಟೆಯಲ್ಲಿ ಅಲ್ಲ, ಹೃದಯದಲ್ಲಿ ಆರಂಭವಾಗುತ್ತದೆ.

ನಿಜವಾದ ಕ್ರಿಸ್‌ಮಸ್‌ನ ಮೊದಲ ಮೌಲ್ಯ ಎಂದರೆ ವಿನಯತೆ. ದೇವರ ಪುತ್ರರಾದ ಯೇಸು ಕ್ರಿಸ್ತರು ಅರಮನೆ ಅಥವಾ ಐಶ್ವರ್ಯವನ್ನು ಆಯ್ಕೆ ಮಾಡಲಿಲ್ಲ. ಅವರು ಬಡವರ ಹಾಗೂ ಸರಳರ ನಡುವೆ ಒಂದು ಕೊಟ್ಟಿಗೆಯಲ್ಲಿ ಜನಿಸಿದರು.  ಘನತೆ ಇರುವುದು ಅಧಿಕಾರದಲ್ಲಿ ಅಥವಾ ಸಂಪತ್ತಿನಲ್ಲಿ ಅಲ್ಲ, ಬದಲಿಗೆ ವಿನಯದಲ್ಲಿದೆ. ನಾವು ನಮ್ರರಾಗಿರುವಾಗ, ಇತರರನ್ನು ಗೌರವಿಸುವಾಗ ಮತ್ತು ಪರಸ್ಪರ ಸ್ವೀಕರಿಸುವಾಗ, ನಾವು ನಿಜವಾಗಿ ಕ್ರಿಸ್‌ಮಸ್ ಆಚರಿಸುತ್ತೇವೆ.

ಕ್ರಿಸ್‌ಮಸ್‌ನ ಎರಡನೇ ಮೌಲ್ಯ ಎಂದರೆ ಪ್ರೀತಿ. ಮೂರನೇ ಮೌಲ್ಯ ಶಾಂತಿ. ನಾಲ್ಕನೇ ಮೌಲ್ಯ ಸೇವೆ ಮತ್ತು ಹಂಚಿಕೆ. ಈ ಪವಿತ್ರ ಹಬ್ಬವನ್ನು ಆಚರಿಸುವಾಗ ನಾವು ನಮ್ಮನ್ನು ಕೇಳಿಕೊಳ್ಳೋಣ. ನಾವು ಹೆಚ್ಚು ಪ್ರೀತಿಪರರಾಗಿದ್ದೇವೆಯೇ, ನಾವು ಹೆಚ್ಚು ವಿನಯಿಗಳಾಗಿದ್ದೇವೆಯೇ, ನಾವು ಶಾಂತಿಯ ನಿರ್ಮಾತೃಗಳಾಗಿದ್ದೇವೆಯೇ, ನಾವು ಹಂಚಿಕೊಳ್ಳಲು ಮತ್ತು ಸೇವೆ ಮಾಡಲು ಸಿದ್ಧರಾಗಿದ್ದೇವೆಯೇ ಈ ಪ್ರಶ್ನೆಗಳಿಗೆ ಉತ್ತರ ಹೌದು ಎಂದಾದರೆ ನಾವು ನಿಜವಾದ ಕ್ರಿಸ್‌ಮಸ್ ಆಚರಿಸುತ್ತಿದ್ದೇವೆ.

ADVERTISEMENT

ಶಿಶು ಯೇಸು ನಮ್ಮನ್ನು ನಮ್ಮ ಕುಟುಂಬಗಳನ್ನು, ನಮ್ಮ ದೇಶವನ್ನು ಮತ್ತು ನಮ್ಮ ಲೋಕವನ್ನು ಪ್ರೀತಿ, ಶಾಂತಿ ಮತ್ತು ಆನಂದದಿಂದ ತುಂಬುವಂತೆ ಆಶೀರ್ವದಿಸಲಿ. ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳು.

–ಫಾದರ್ ಮೆಲ್ವಿನ್ ಟೆಲ್ಲಿಸ್, ನಿತ್ಯಾಧಾರ ಮಾತೆಯ ದೇವಾಲಯ, ಕೊಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.