ADVERTISEMENT

ಭಾರತದ ಜಯ ಮುಖ್ಯ: ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 9 ಮೇ 2025, 15:56 IST
Last Updated 9 ಮೇ 2025, 15:56 IST
ಪಿಳ್ಳೇನಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪಿ.ಡಿ.ನವೀನ್‌ ಅವರನ್ನು ಸಿ.ಟಿ.ರವಿ ಅಭಿನಂದಿಸಿದರು
ಪಿಳ್ಳೇನಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪಿ.ಡಿ.ನವೀನ್‌ ಅವರನ್ನು ಸಿ.ಟಿ.ರವಿ ಅಭಿನಂದಿಸಿದರು   

ಚಿಕ್ಕಮಗಳೂರು: ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆಯುತ್ತಿದ್ದು, ಇದರಲ್ಲಿ ಭಾರತ ಜಯ ಗಳಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ಶುಕ್ರವಾರ ಪಿಳ್ಳೇನಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪಿ.ಡಿ.ನವೀನ್‌ ಅವರಿಗೆ ಅಭಿನಂದಿಸಿ ಮಾತನಾಡಿದ ಅವರು, ‘ನಾವು ಇಲ್ಲಿ ಗೆಲ್ಲುವುದು ಮುಖ್ಯವಾದರೆ ಅದಕ್ಕಿಂತ ಮುಖ್ಯವಾಗಿ ಭಾರತ ದೇಶ ಗೆಲ್ಲಬೇಕು. ಆ ಗೆಲುವಿಗೆ ಪೂರಕವಾಗಿ ಇಲ್ಲಿರುವ ಎಲ್ಲಾ ಗ್ರಾ.ಪಂ ಸದಸ್ಯರ ವಿಶ್ವಾಸ ಪಡೆದು ದೇಶ ಮುಖ್ಯ ಎಂದುಕೊಂಡು ಜನರ ವೈಯಕ್ತಿಕ ಸಮಸ್ಯೆ ಬಗೆಹರಿಸಲು ಕೆಲಸ ಮಾಡಬೇಕು’ ಎಂದರು.

ಅಧ್ಯಕ್ಷರಾಗುವುದು ಎಷ್ಟು ಮುಖ್ಯವೋ, ಒಳ್ಳೆಯ ಹೆಸರು ಗಳಿಸುವಂತೆ ಕೆಲಸ ಮಾಡುವುದು ಅಷ್ಟೇ ಮುಖ್ಯ. ಹಳ್ಳಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವ ಜೊತೆಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಮುಂದಾಗಬೇಕು ಎಂದು ತಿಳಿಸಿದರು.

ADVERTISEMENT

ಗ್ರಾ.ಪಂ ಉಪಾಧ್ಯಕ್ಷೆ ಶಾರದಮ್ಮ, ಸದಸ್ಯರಾದ ಪಿ.ಎನ್. ರಮೇಶ್, ಮಹೇಶ್ವರಾಚಾರ್, ಬಿ.ಎಚ್.ಶಶಿಧರ, ನಾಗರಾಜನಾಯ್ಕ, ಭಾಗ್ಯ, ಪವಿತ್ರ, ಸಾವಿತ್ರಮ್ಮ, ಸೌಂದರ್ಯ, ಮುಖಂಡ ಪಿಳ್ಳೇನಹಳ್ಳಿ ರಮೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.