ADVERTISEMENT

ದುರ್ಗಾ ದೇವಿಗೆ ಇಂದ್ರಾಣಿ ಅಲಂಕಾರ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2022, 4:39 IST
Last Updated 3 ಅಕ್ಟೋಬರ್ 2022, 4:39 IST
ಕೊಪ್ಪದ ಮಾರ್ಕೇಟ್ ರಸ್ತೆಯಲ್ಲಿ ಪ್ರತಿಷ್ಠಾಪಿಸಿರುವ ದುರ್ಗಾದೇವಿಗೆ ಭಾನುವಾರ ಇಂದ್ರಾಣಿ ಅಲಂಕಾರ ಮಾಡಲಾಗಿತ್ತು.
ಕೊಪ್ಪದ ಮಾರ್ಕೇಟ್ ರಸ್ತೆಯಲ್ಲಿ ಪ್ರತಿಷ್ಠಾಪಿಸಿರುವ ದುರ್ಗಾದೇವಿಗೆ ಭಾನುವಾರ ಇಂದ್ರಾಣಿ ಅಲಂಕಾರ ಮಾಡಲಾಗಿತ್ತು.   

ಕೊಪ್ಪ: ಫ್ರೆಂಡ್ಸ್ ಸರ್ಕಲ್ ಗೆಳೆಯರ ಬಳಗ, ಗಣೇಶ-ದುರ್ಗಾ ದೇವಸ್ಥಾನ ಸೇವಾ ಟ್ರಸ್ಟ್ ವತಿಯಿಂದ ಮಾರ್ಕೇಟ್ ರಸ್ತೆಯಲ್ಲಿನ ಬಲಮುರಿ ವೀರಗಣಪತಿ ದೇವಸ್ಥಾನದ ಭವನದಲ್ಲಿ ನವರಾತ್ರಿಯಂದು ಪ್ರತಿಷ್ಠಾಪಿಸಿರುವ ದುರ್ಗಾದೇವಿಗೆ ಭಾನುವಾರ ಇಂದ್ರಾಣಿ ಅಲಂಕಾರ ಮಾಡಲಾಗಿತ್ತು.

ಸಾಮೂಹಿಕ ಕುಂಕುಮಾರ್ಚನೆ, ಸಂಜೆ 1008 ತೆಂಗಿನಕಾಯಿ ಮೂಡು ಗಣಪತಿ ಸೇವೆ ನಡೆಯಿತು. ಬಳಿಕ ಡೆಸ್ಟಿನಿ ಸ್ಕೂಲ್ ಆಫ್ ಡಾನ್ಸ್ ವತಿಯಿಂದ ‘ನೃತ್ಯ ರೂಪಕ’ ಆಯೋಜಿಸಲಾಗಿತ್ತು.

ಅ.3 ರಂದು ಚಂಡಿಕಾ ಹೋಮ, ಬಾಗಿನ ಸೇವೆ ನಡೆಯಲಿದೆ. ದೇವಿಗೆ ಚಾಮುಂಡಿ ಅಲಂಕಾರ ಮಾಡಲಾಗುತ್ತಿದೆ. ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಸಂಜೆ 7 ಗಂಟೆಯಿಂದ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಡೂರು ಮಂದಾರ್ತಿ ಅವರಿಂದ ‘ಮಹಿಷ ಮರ್ದಿನಿ’ ಕಾಲಮಿತಿ ಯಕ್ಷಗಾನ ನಡೆಯಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.