ADVERTISEMENT

ದೆಹಲಿಯಲ್ಲಿ ಮಲೆನಾಡಿನ ಜಾನಪದ ಕಲಾ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2022, 8:44 IST
Last Updated 28 ಅಕ್ಟೋಬರ್ 2022, 8:44 IST
ನರಸಿಂಹರಾಜಪುರದ ಅಭಿನವ ಪ್ರತಿಭಾ ವೇದಿಕೆಯ ಕಲಾವಿದರು ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಗುರುವಾರ ಪ್ರಯಾಣ ಬೆಳೆಸಿದರು.
ನರಸಿಂಹರಾಜಪುರದ ಅಭಿನವ ಪ್ರತಿಭಾ ವೇದಿಕೆಯ ಕಲಾವಿದರು ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಗುರುವಾರ ಪ್ರಯಾಣ ಬೆಳೆಸಿದರು.   

ನರಸಿಂಹರಾಜಪುರ: ‘ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವವು ಅ. 29ಮತ್ತು 30ರಂದು ನವದೆಹಲಿಯಲ್ಲಿನ ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ನಡೆಯಲಿದೆ. ಇದರಲ್ಲಿ ಎನ್.ಆರ್.ಪುರ ಅಭಿನವ ಪ್ರತಿಭಾ ವೇದಿಕೆಯಿಂದ ಮಲೆನಾಡಿನ ಜಾನಪದ ಕಲಾ ಪ್ರದರ್ಶನ ನೀಡಲಿದೆ’ ಎಂದು ಅಭಿನವ ಪ್ರತಿಭಾ ವೇದಿಕೆಯ ಅಭಿನವ ಗಿರಿರಾಜ್ ತಿಳಿಸಿದ್ದಾರೆ.

ಅಮೃತ ಮಹೋತ್ಸವದಲ್ಲಿ ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಚಿರ್ತದುರ್ಗ ಜಿಲ್ಲೆಗಳ ಮಲೆನಾಡು ಸಾಂಸ್ಕೃತಿ ಉತ್ಸವ ನಡೆಯಲಿದ್ದು ಎನ್.ಆರ್.ಪುರದ ಅಭಿನವ ಪ್ರತಿಭಾ ವೇದಿಕೆಯಿಂದ ಗೀಗೀ ಪದ, ಲಾವಣಿ, ಜಾನಪದಗೀತೆ, ಭಾವಗೀತೆ, ತತ್ವಪದಗಳು, ಅಂಟಿಗೆ ಪಿಂಟಿಗೆ, ಚಿತ್ರ ಗೀತೆ ಮತ್ತು ಜಾಗೃತಿ ಗೀತೆಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದೆ. ಈ ತಂಡದಲ್ಲಿ ಕಲಾವಿದರಾದ ಶೇಖಬ್ಬ, ಅಭಿನವ ಗಿರಿರಾಜ್, ಮಂಜು ಎನ್.ಗೌಡ, ಶೆಟ್ಟಿಕೊಪ್ಪ ಎಂ.ಮಹೇಶ್, ಸಾರ್ಯ ಗುರುಮೂರ್ತಿ, ದೊಡ್ಡಿನತಲೆ ಕೇಶವ, ರಾಮ್ ಧ್ರುವರಾಜ್, ಮಂಜುಶ್ರೀ, ಸಾಜು, ರಾಮಮೋಹನ್, ಗ್ರೀಷ್ಮ, ಗೀತಾಂಜಲಿ, ವೇದಿಕೆಯ ಮೇಲ್ವಿಚಾರಕಿ ಮಾಲಾ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT