ಕೊಪ್ಪ: ಇಲ್ಲಿನ ಜೇಸಿಐ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಜೇಸಿಐ ಭಾರತದ ವಲಯ 14ರ ಮಧ್ಯ ವಾರ್ಷಿಕ ಸಮ್ಮೇಳನ ‘ವೈಭವ -25’ ಕಾರ್ಯಕ್ರಮವು ಪಟ್ಟಣದ ಯಸ್ಕಾನ್ ಸಭಾಂಗಣದಲ್ಲಿ ಈಚೆಗೆ ನಡೆಯಿತು.
ಸಮ್ಮೇಳನದಲ್ಲಿ ಬೆಂಗಳೂರು, ದೇವನಹಳ್ಳಿ, ವಿಜಯಪುರ, ಮೈಸೂರು, ಕೊಡಗು, ತುಮಕೂರು ಸೇರಿದಂತೆ ಅನೇಕ ಕಡೆಗಳಿಂದ ಜೇಸಿಐ ಸಂಸ್ಥೆಯ ಅಧ್ಯಕ್ಷರು, ಸದಸ್ಯರು ಒಟ್ಟು 300ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.
ಜೇಸಿಐ ವಲಯ ಉಪಾಧ್ಯಕ್ಷ ಅಕ್ಷಯ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜೇಸಿಐ ಭಾರತ ವಲಯಾಧ್ಯಕ್ಷ ವಿಜಯಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಶಿವಮೊಗ್ಗದ ಕಸ್ತೂರಬಾ ಬಾಲಿಕ ಪದವಿಪೂರ್ವ ಕಾಲೇಜು ನಿವೃತ್ತ ಉಪನ್ಯಾಸಕ ಜಿ.ಎಸ್. ನಟೇಶ್ ದಿಕ್ಸೂಚಿ ಭಾಷಣ ಮಾಡಿದರು. ಜೇಸಿಐ ಕೊಪ್ಪ ಘಟಕದ 4 ಯೋಜನೆಗಳಿಗೆ 2 ಪ್ರಶಸ್ತಿಗಳಿಗೆ ಭಾಜನವಾಯಿತು.
ಜೇಸಿಐ ರಾಷ್ಟ್ರೀಯ ಸಂಸದೀಯ ಸದಸ್ಯ ನರೇನ್ ಕಾರ್ಯಪ್ಪ, ಜೇಸಿಐ ಪೂರ್ವ ವಲಯಾಧ್ಯಕ್ಷ ಜಯಚಂದರ್ ಸಿ.ಜೆ., ಜೇಸಿ ಯೋಗೇಶ್ ಮೂಡಿಗೆರೆ, ಜೇಸಿಐ ಕೊಪ್ಪ ಘಟಕದ ಅಧ್ಯಕ್ಷೆ ಶ್ರುತಿ ರೋಹಿತ್, ಸಮ್ಮೇಳನದ ಸಂಯೋಜಕ ಗುರುಮೂರ್ತಿ, ಕಾರ್ಯಕ್ರಮ ನಿರ್ದೇಶಕ ಚರಣ್ ಹೆಬ್ಬಾರ್ ಇದ್ದರು.
ಸಂಸ್ಥೆಯ ಜಿ.ಎನ್.ಪ್ರಸನ್ನ ಕುಮಾರ್, ಕೆ.ಬಿ.ಪ್ರಸನ್ನ, ದುರ್ಗೇಶ್, ರಾಘವೇಂದ್ರ, ರಾಘವೇಂದ್ರ ಕೆ.ಆರ್., ಹೇಮಂತ್ ಶೆಟ್ಟಿ, ಪವನ್, ಡಾ.ಸುಹಾಸ್, ಸುಬ್ರಹ್ಮಣ್ಯ, ಸ್ವಾತಿ, ಶರತ್, ತೀರ್ಥ ಶೆಟ್ಟಿ ಕಾರ್ಯಕ್ರಮದ ನಿರ್ವಹಣೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.