
ಕಡೂರು: ಕಡೂರು ಹೊರವಲಯದಲ್ಲಿ ಬೈಪಾಸ್ ಸಮೀಪದಿಂದ ಬೀರೂರು ತಲುಪುವವರೆಗೆ 20ಕ್ಕೂ ಹೆಚ್ಚು ಹಾಗೂ ಕಡೂರಿಗೆ ಬರುವಾಗ ಸರ್ವಿಸ್ ರಸ್ತೆಯಲ್ಲಿಯೂ ಸೇರಿ ಎರಡೂ ಬದಿ ಒಟ್ಟು 35ಕ್ಕೂ ಹೆಚ್ಚು ರಸ್ತೆ ಉಬ್ಬುಗಳಿದ್ದು, ಪ್ರಯಾಣಿಕರು ವಾಹನದಲ್ಲಿ ಸಂಚರಿಸುವುದು ದುಸ್ತರವಾಗುತ್ತಿದೆ.
ಶಿವಮೊಗ್ಗ-ಬೆಂಗಳೂರು ನಡುವೆ ನಿತ್ಯ ಹತ್ತಾರು ಆಂಬುಲೆನ್ಸ್‌ಗಳು ಸಂಚರಿಸುತ್ತವೆ. ರೋಗಿಗಳು ಕೂಡ ಅಂಗೈಲಿ ಜೀವ ಹಿಡಿದುಕೊಂಡೇ ಓಡಾಡುವ ಸ್ಥಿತಿ ಇದೆ. ರಸ್ತೆ ಉಬ್ಬುಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಿರುವುದೇ ಇದಕ್ಕೆ ಕಾರಣ. ರಾತ್ರಿ ವೇಳೆಯಲ್ಲಿ ಸರಂಜಾಮು ತುಂಬಿದ ಲಾರಿಯಂತಹ ವಾಹನಗಳು ಸಂಚರಿಸುವಾಗ ಏಕಾಏಕಿ ರಸ್ತೆ ಉಬ್ಬುಗಳ ಬಳಿ ಬ್ರೇಕ್ ಹಾಕಿದರೆ ಹಿಂದಿನಿಂದ ಬರುವ ವಾಹನ ಅಥವಾ ಬೈಕ್‌ಗಳು ನಿಯಂತ್ರಣ ತಪ್ಪಿ ಅಪಘಾತ ಉಂಟಾಗುವ ಘಟನೆಗಳೂ ವರದಿಯಾಗುತ್ತಿವೆ. ಬಸ್‌ಗಳ ಹಿಂಬದಿ ಸೀಟುಗಳಲ್ಲಿ ಕುಳಿತವರಂತೂ ಮೈ-ಕೈ ನಜ್ಜುಗುಜ್ಜಾಗಿಸಿಕೊಂಡು ಪ್ರಯಾಣಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹಳ್ಳಿ, ಶಾಲೆ ಇರುವಲ್ಲಿ ವೈಜ್ಞಾನಿಕವಾಗಿ ಚಿಂತಿಸಿ ಹಂಪ್ ಅಳವಡಿಸಲಿ. ಅನಗತ್ಯವಾಗಿರುವ ಹಂಪ್‌ಗಳನ್ನು ತೆರವುಗೊಳಿಸಲಿ ಎಂದು ನಾಗರಿಕರು, ಪ್ರಯಾಣಿಕರು, ವಾಹನ ಮಾಲೀಕರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.