ADVERTISEMENT

ಕಾಡುಕೋಣ ದಾಳಿ: ಕೃಷಿಕನಿಗೆ ಗಂಭೀರ ಗಾಯ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2023, 11:02 IST
Last Updated 26 ಆಗಸ್ಟ್ 2023, 11:02 IST
ಕಳಸ ಸಮೀಪದ ಮುಜೇಕಾನಿನ ಕೃಷಿಕ ಮರಿಗೌಡ ಅವರಿಗೆ ಕಾಡುಕೋಣದ ದಾಳಿಯಿಂದ ಆದ ಗಾಯಕ್ಕೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶನಿವಾರ ಪ್ರಥಮ ಚಿಕಿತ್ಸೆ ನೀಡಲಾಯಿತು
ಕಳಸ ಸಮೀಪದ ಮುಜೇಕಾನಿನ ಕೃಷಿಕ ಮರಿಗೌಡ ಅವರಿಗೆ ಕಾಡುಕೋಣದ ದಾಳಿಯಿಂದ ಆದ ಗಾಯಕ್ಕೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶನಿವಾರ ಪ್ರಥಮ ಚಿಕಿತ್ಸೆ ನೀಡಲಾಯಿತು   

ಕಳಸ: ಹಳುವಳ್ಳಿ ಸಮೀಪದ ಮುಜೆಕಾನು ಗ್ರಾಮದ ಬಳಿ ಕಾಡುಕೋಣದ ದಾಳಿಯಿಂದ ಕೃಷಿಕರೊಬ್ಬರು ಶನಿವಾರ ಮಧ್ಯಾಹ್ನ ಗಂಭೀರ ಗಾಯಗೊಂಡಿದ್ದಾರೆ.

ಕಳಸಕ್ಕೆ ಬರುತ್ತಿದ್ದ ಮುಜೆಕಾನು ಗ್ರಾಮದ ಮರಿಗೌಡ (60) ಅವರಿಗೆ ಕರ‍್ನಾಳಿ ಸಮೀಪ ಕಾಡುಕೋಣ ಎದುರಾಗಿದೆ. ಕೋಣದ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಅವರು ನೆಲದ ಮೇಲೆ ಮಲಗಿದ್ದಾರೆ. ಆದರೂ ಕಾಡುಕೋಣ ಮರಿಗೌಡ ಅವರತ್ತ ನುಗ್ಗಿಬಂದು ಎದೆಗೆ ಕೋಡಿನಿಂದ ಇರಿದು ಮೇಲಕ್ಕೆ ಎಸೆದಿದೆ.

ಕೋಣದ ದಾಳಿಯಿಂದ ಎದೆಯಲ್ಲಿ ತೀವ್ರವಾಗಿ ರಕ್ತಸ್ರಾವ ಆಗಿದ್ದ ಮರಿಗೌಡ ರಸ್ತೆಯಲ್ಲಿ ಬಿದ್ದು ನೆರವಿಗೆ ಕೂಗಿದರು. ಹತ್ತಿರದಲ್ಲಿದ್ದ ಹಳ್ಳಿಗರು ಅವರನ್ನು ಚಿಕಿತ್ಸೆಗೆ ಕಳಸಕ್ಕೆ ಕರೆತಂದರು.

ADVERTISEMENT

ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಮರಿಗೌಡ ಅವರನ್ನು ಮಂಗಳೂರಿಗೆ ಕರೆದೊಯ್ಯಲಾಗಿದೆ. ಕೋಣದ ಇರಿತದಿಂದ ಶ್ವಾಸಕೋಶಕ್ಕೆ ಗಂಭೀರ ಗಾಯಗಳಾಗಿವೆ. ಹೃದಯದವರೆಗೂ ಗಾಯ ಆಗಿದೆ ಎಂದು ತಿಳಿದುಬಂದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.