ADVERTISEMENT

ಕಳಸ | ಟ್ರಾಫಿಕ್ ಸಮಸ್ಯೆ: ಡಿವೈಎಸ್‌ಪಿ ಪರಿಶಿಲನೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 3:17 IST
Last Updated 10 ಜುಲೈ 2025, 3:17 IST
ಕಳಸದ ಮಹಾವೀರ ವೃತ್ತದ ಬಳಿ ಆಟೊ ನಿಲ್ದಾಣ ಸ್ಥಳಾಂತರ ಮಾಡುವಂತೆ ಡಿವೈಎಸ್‍ಪಿ ಬಾಲಾಜಿ ಸಿಂಗ್ ಸೂಚಿಸಿದರು
ಕಳಸದ ಮಹಾವೀರ ವೃತ್ತದ ಬಳಿ ಆಟೊ ನಿಲ್ದಾಣ ಸ್ಥಳಾಂತರ ಮಾಡುವಂತೆ ಡಿವೈಎಸ್‍ಪಿ ಬಾಲಾಜಿ ಸಿಂಗ್ ಸೂಚಿಸಿದರು   

ಕಳಸ: ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆಗಳ ಬಗ್ಗೆ ಬುಧವಾರ ಕೊಪ್ಪ ಡಿವೈಎಸ್‍ಪಿ ಬಾಲಾಜಿ ಸಿಂಗ್ ಅವರು ವಿಶೇಷ ಸಭೆ ನಡೆಸಿದರು.

ಆಟೊ ಚಾಲಕರು, ಲಾರಿ, ಪಿಕಪ್ ಚಾಲಕರು, ಬಸ್ ಮಾಲೀಕರು ಮತ್ತು ವ್ಯಾಪಾರಿಗಳ ಜೊತೆ ಸಮಾಲೋಚನೆ ಮಾಡಿದ ಅವರು ಟ್ರಾಫಿಕ್ ಸಮಸ್ಯೆ ನಿವಾರಿಸುವ ಬಗ್ಗೆ ಅರಿವು ಮೂಡಿಸಿದರು.

ಕೆ.ಎಂ.ರಸ್ತೆ, ಮಹಾವೀರ ರಸ್ತೆ, ಮುಖ್ಯರಸ್ತೆಯಲ್ಲಿ ಬೇಕಾಬಿಟ್ಟಿ ವಾಹನ ನಿಲ್ಲಿಸುವವರಿಗೆ ದಂಡ ವಿಧಿಸಲಾಗುವುದು. ವಾಹನ ಚಲಾಯಿಸುವಾಗ ಫೋನ್ ಬಳಸುವವರು, ಹೆಲ್ಮೆಟ್ ಧರಿಸದವರು, ನಿಯಮಗಳಿಗೆ ವಿರುದ್ಧವಾಗಿ ವಾಹನ ಚಲಾಯಿಸುವವರಿಗೆ ದಂಡ ವಿಧಿಸಲಾಗುವುದು ಎಂದು ತಿಳಿಸಿದರು. ಕಳಸದ ಮಹಾವೀರ ವೃತ್ತದ ಬಳಿ ಆಟೊ ನಿಲ್ದಾಣ ಸ್ಥಳಾಂತರ ಮಾಡುವಂತೆ ಸೂಚಿಸಿದರು.

ADVERTISEMENT

ಬಳಿಕ ಪಟ್ಟಣದ ವಿವಿಧೆಡೆ ಟ್ರಾಫಿಕ್ ಸಮಸ್ಯೆ ಇರುವ ಸ್ಥಳಗಳಿಗೆ ಭೇಟಿ ನೀಡಿ ಸಲಹೆ ನೀಡಿದರು. ಮುಖ್ಯರಸ್ತೆಯಲ್ಲಿ ವಾಹನ ಪಾರ್ಕಿಂಗ್ ಮಾಡಲು ಪಂಚಾಯಿತಿ ಅಗತ್ಯ ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಕಳಸ ಠಾಣಾಧಿಕಾರಿ ಚಂದ್ರಶೇಖರ್, ಕುದುರೆಮುಖ ಠಾಣಾಧಿಕಾರಿ ಆದರ್ಶ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.