ಕಳಸ: ಟರ್ಕಿಯಲ್ಲಿ ಶುಕ್ರವಾರ ಮುಕ್ತಾಯವಾದ 3 ದಿನಗಳ ಅಂತರರಾಷ್ಟ್ರೀಯ ಪವನ ಶಕ್ತಿ ಸಮ್ಮೇಳನದಲ್ಲಿ ಕಳಸದ ದೀಶಿತ್ ಜೈನ್ ಭಾಗವಹಿಸಿ ಗಮನ ಸೆಳೆದಿದ್ದಾರೆ.
ಅವರು ಭಾರತದ ಅರಬ್ಬಿ ಸಮುದ್ರದ ಪಶ್ಚಿಮ ಕರಾವಳಿಯಲ್ಲಿ ಕಡಲಾಚೆಯ ಗಾಳಿಯ ವೇಗದ ಅಧ್ಯಯನದ ಬಗ್ಗೆ ಸಮ್ಮೇಳನದಲ್ಲಿ ವಿಚಾರ ಮಂಡನೆ ಮಾಡಿದರು.
ಅವರು 15 ವರ್ಷಗಳಿಂದ ಪವನ ವಿದ್ಯುತ್ ಸಂಸ್ಥೆಗಳಲ್ಲಿ ಭಾರತ, ಡೆನ್ಮಾರ್ಕ್ ದೇಶದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ವಿಂಡ್‍ಸಿಮ್ ಸಂಸ್ಥೆಯಲ್ಲಿ ಪವನ ಶಕ್ತಿ ಎಂಜಿನಿಯರಿಂಗ್ ವಿಭಾಗದ ಸಂಶೋಧನೆ ಮತ್ತು ಅಧ್ಯಯನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಕವಿ ಪ್ರೇಮ್ ಕುಮಾರ್, ಸೌಭಾಗ್ಯ ದಂಪತಿ ಪುತ್ರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.