ADVERTISEMENT

ಮೂಡಿಗೆರೆ | ಕೆಂಪೇಗೌಡರ ಶ್ರಮ: ಮಾದರಿ ನಗರ ನಿರ್ಮಾಣ-ಎಂ.ಪಿ.ಕುಮಾರಸ್ವಾಮಿ

ಕೆಂಪೇಗೌಡ ಜಯಂತಿಯಲ್ಲಿ ಶಾಸಕ ಎಂ.ಪಿ.ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 29 ಜೂನ್ 2022, 2:55 IST
Last Updated 29 ಜೂನ್ 2022, 2:55 IST
ಕೆಂಪೇಗೌಡರ ಜಯಂತ್ಯುತ್ಸವವನ್ನು ಸೊಮವಾರ ವಿಧಾನ ಪರಿಷತ್ ಸದಸ್ಯ ಎಂ.ಕೆ. ಪ್ರಾಣೇಶ್ ಉದ್ಘಾಟಿಸಿದರು. ಶಾಸಕ ಎಂ.ಪಿ. ಕುಮಾರಸ್ವಾಮಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಿ.ಬಿ. ಧರ್ಮಪಾಲ್, ತಹಶೀಲ್ದಾರ್ ನಾಗರಾಜು ಇದ್ದರು
ಕೆಂಪೇಗೌಡರ ಜಯಂತ್ಯುತ್ಸವವನ್ನು ಸೊಮವಾರ ವಿಧಾನ ಪರಿಷತ್ ಸದಸ್ಯ ಎಂ.ಕೆ. ಪ್ರಾಣೇಶ್ ಉದ್ಘಾಟಿಸಿದರು. ಶಾಸಕ ಎಂ.ಪಿ. ಕುಮಾರಸ್ವಾಮಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಿ.ಬಿ. ಧರ್ಮಪಾಲ್, ತಹಶೀಲ್ದಾರ್ ನಾಗರಾಜು ಇದ್ದರು   

ಮೂಡಿಗೆರೆ: ನಾಡಪ್ರಭು ಕೆಂಪೇಗೌಡ ಶ್ರಮ, ದೂರದೃಷ್ಟಿಯಿಂದಾಗಿ ಇಂದು ಬೆಂಗಳೂರು ವಿಶ್ವಕ್ಕೆ ಮಾದರಿ ನಗರವಾಗಿದೆ ಎಂದು ಶಾಸಕ ಎಂ.ಪಿ. ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ತಾಲ್ಲೂಕು ಆಡಳಿತದಿಂದ ಸೋಮವಾರ ಸಂಜೆ ನಡೆದ ಕೆಂಪೇಗೌಡ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

ಐಡಿಎಸ್‍ಜಿ ಕಾಲೇಜು ಸಹಾಯಕ ಪ್ರಾಧ್ಯಾಪಕ ಸಂಪತ್‍ಕುಮಾರ್ ಮಾತನಾಡಿ, ‘ಕೆಂಪೇಗೌಡರು ಯಾವ ವಾಸ್ತು ತಜ್ಞ, ಅರ್ಥಶಾಸ್ತ್ರ ತಜ್ಞರಿಗೆ ಕಡಿಮೆ ಇಲ್ಲದಂತೆ ಬೆಂಗಳೂರು ಕಟ್ಟಿದ್ದು, ಎಲ್ಲಾ ಜನಾಂಗದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಕೆಂಪೇಗೌಡರ ಜಯಂತಿ ಆತ್ಮಾವಲೋಕನಕ್ಕೆ ವೇದಿಕೆಯಾಗಬೇಕು’ ಎಂದರು.

ADVERTISEMENT

ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಿ.ಬಿ. ಧರ್ಮಪಾಲ್, ಸದಸ್ಯರಾದ ಆಶಾ ಮೋಹನ್, ಪಿ.ಜಿ. ಅನುಕುಮಾರ್, ಮನೋಜ್, ಎಚ್.ಪಿ. ರಮೇಶ್, ಪಟೇಲ್ ಮಂಜು, ಸಿ.ಎಂ. ಗೀತಾ, ಕಾಫಿನಾಡು ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷೆ ಕಲಾವತಿರಾಜಣ್ಣ, ತಹಶೀಲ್ದಾರ್ ನಾಗರಾಜು, ಗೃಹ ಮಂಡಳಿ ಮಾಜಿ ಅಧ್ಯಕ್ಷ ಹಾಲಪ್ಪಗೌಡ, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಲಕ್ಷ್ಮಣಗೌಡ, ಪ್ರದೀಪ್, ಬ್ರಿಜೇಶ್, ಬಾಲಕೃಷ್ಣ, ಅನುಪಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.