ಆಲ್ದೂರು: ವಲಯ ಒಕ್ಕಲಿಗ ಸಂಘ, ನಾಡಪ್ರಭು ಕೆಂಪೇಗೌಡ ಕ್ರಿಕೆಟ್ ಕ್ಲಬ್ ವತಿಯಿಂದ ಆಯೋಜಿಸಿದ್ದ 9ನೇ ಆವೃತ್ತಿಯ 3 ದಿನಗಳ ಕ್ರಿಕೆಟ್ ಟೂರ್ನಿಗೆ ಶನಿವಾರ ಚಾಲನೆ ನೀಡಲಾಯಿತು.
ಪಟ್ಟಣದ ಕೆಳ ಬಸ್ ನಿಲ್ದಾಣದಿಂದ ಎತ್ತಿನಗಾಡಿ ಮತ್ತು ಬೈಕ್‌ಗಳೊಂದಿಗೆ ಪ್ರಾರಂಭವಾದ ಮೆರವಣಿಗೆ ಪಟ್ಟಣದ ಮುಖ್ಯಬೀದಿಗಳಲ್ಲಿ ಸಾಗಿ, ಕೆಂಪೇಗೌಡ ವೃತ್ತದಲ್ಲಿರುವ ನಾಡಪ್ರಭು ಕೆಂಪೇಗೌಡ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮುಕ್ತಾಯಗೊಳಿಸಲಾಯಿತು.
ಒಕ್ಕಲಿಗ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ್, ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಸಂಘದ ಮುಖಂಡರಾದ ಮಾಡ್ಲಾ ಪ್ರಕಾಶ್, ವಲಯ ಒಕ್ಕಲಿಗ ಸಂಘದ ಅಧ್ಯಕ್ಷ ಅಶೋಕ್ ಡಿ.ಬಿ., ಕಾರ್ಯದರ್ಶಿ ವಸಂತ್ ಕುಮಾರ್, ಕೆಂಪೇಗೌಡ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಹೆಡದಾಳು ಶಾಮಿಯಾನ ಮಧು, ರಾಕೇಶ್, ಮಿಥುನ್, ಅರವಿಂದ್ ಕೂದುವಳ್ಳಿ, ಪಂಚಾಯಿತಿ ಉಪಾಧ್ಯಕ್ಷ ಕೌಶಿಕ್ ಎ.ಡಿ, ಸದಸ್ಯರಾದ ಎಸ್.ಕೆ.ಲಿಂಗೇಗೌಡ, ಪ್ರದೀಪ್, ಆಣೂರು ಪಂಚಾಯಿತಿ ಅಧ್ಯಕ್ಷ ದಿನೇಶ್ ಎಚ್.ಎಚ್., ಸಂಪತ್ ಹೆಡದಾಳು, ವಸ್ತಾರೆ–ಆವತಿ–ಆಲ್ದೂರು ಹೋಬಳಿಗಳಿಂದ 16 ತಂಡಗಳ ಕ್ರೀಡಾಪಟುಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.