ADVERTISEMENT

26ರಂದು ಕೆಎಫ್‍ಡಿ ನಿರೋಧಕ ಲಸಿಕೆ– ಡಾ.ವೀರಪ್ರಸಾದ್

26ರಂದು ಕೆಎಫ್‍ಡಿ ನಿರೋಧಕ ಲಸಿಕೆ– ಡಾ.ವೀರಪ್ರಸಾದ್

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 4:31 IST
Last Updated 24 ಫೆಬ್ರುವರಿ 2021, 4:31 IST
ನರಸಿಂಹರಾಜಪುರ ತಾಲ್ಲೂಕಿನ ಕೊನೋಡಿ ಗ್ರಾಮದ ಬೆಮ್ಮನೆ ಹಾಗೂ ಸುತ್ತ ಮುತ್ತಲಿನ ಗ್ರಾಮಕ್ಕೆ ಶಿವಮೊಗ್ಗದ ಪರಿಮಾಣು ಕ್ರಿಮಿ ಸಂಶೋಧನಾ ಪ್ರಯೋಗ ಶಾಲೆಯ ನಿರ್ದೇಶಕ ಡಾ.ಕಿರಣ್ ಮತ್ತು ತಂಡದವರು ಭೇಟಿ ನೀಡಿ ಸಾರ್ವಜನಿಕರಿಗೆ ಸಲಹೆ ನೀಡಿದರು.
ನರಸಿಂಹರಾಜಪುರ ತಾಲ್ಲೂಕಿನ ಕೊನೋಡಿ ಗ್ರಾಮದ ಬೆಮ್ಮನೆ ಹಾಗೂ ಸುತ್ತ ಮುತ್ತಲಿನ ಗ್ರಾಮಕ್ಕೆ ಶಿವಮೊಗ್ಗದ ಪರಿಮಾಣು ಕ್ರಿಮಿ ಸಂಶೋಧನಾ ಪ್ರಯೋಗ ಶಾಲೆಯ ನಿರ್ದೇಶಕ ಡಾ.ಕಿರಣ್ ಮತ್ತು ತಂಡದವರು ಭೇಟಿ ನೀಡಿ ಸಾರ್ವಜನಿಕರಿಗೆ ಸಲಹೆ ನೀಡಿದರು.   

ಬೆಮ್ಮನೆ (ಎನ್.ಆರ್.ಪುರ): ತಾಲ್ಲೂಕಿನ ಸೀತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಮ್ಮನೆ ಗ್ರಾಮದ 64 ವರ್ಷದ ವ್ಯಕ್ತಿಯೊಬ್ಬರಿಗೆ ಮಂಗನ ಕಾಯಿಲೆ ತಗುಲಿರುವುದು ದೃಢಪಟ್ಟಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೀರಪ್ರಸಾದ್ ತಿಳಿಸಿದ್ದಾರೆ.

‘ಈ ವರ್ಷದ ಮಂಗನ ಕಾಯಿಲೆಯ ಮೊದಲ ಪ್ರಕರಣ ಇದಾಗಿದೆ. ಮುಂಜಾಗ್ರತಾ ಕ್ರಮವಾಗಿ ಹೆಮ್ಮೂರು, ಕೊನೋಡಿ, ಬೆಮ್ಮನೆ, ಕಾರಹಡಲು, ಹೊನಗಾರು, ಮಕ್ಕಿಕೊಪ್ಪ ಸೇರಿ ಆರು ಹಳ್ಳಿಗಳ ಜನರಿಗೆ ಇದೇ 26ರಂದು ಕೆಎಫ್‍ಡಿ ಲಸಿಕೆ ಹಾಕಲಾಗುವುದು. ಬೆಳಿಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಸಮೀಪದ ಅಂಗನವಾಡಿ ಕೇಂದ್ರಗಳಲ್ಲಿ ಲಸಿಕೆ ಹಾಕಲಾಗುತ್ತದೆ.

ಸ್ಥಳೀಯರು ಬಂದು ಲಸಿಕೆ ಪಡೆಯಬೇಕು. ಸಮೀಪದ ಕಾಡಿಗೆ ಹೋಗಬೇಕಾದ ಸಂದರ್ಭದಲ್ಲಿ ಡಿಎಂಪಿ ಎಣ್ಣೆಯನ್ನು ಕೈ–ಕಾಲುಗಳಿಗೆ ಹಚ್ಚಿಕೊಂಡು ಹೋಗಬೇಕು. ಸಮೀಪದ ಕಾಡು ಅಥವಾ ಗ್ರಾಮಗಳಲ್ಲಿ ಮಂಗಗಳು ಮರಣ ಹೊಂದಿದರೆ ಕೂಡಲೇ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.