ADVERTISEMENT

ಬಾಳೆಹೊನ್ನೂರು: ಐವರಲ್ಲಿ ಕೆಎಫ್‌ಡಿ ಸೋಂಕು

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2025, 15:47 IST
Last Updated 7 ಫೆಬ್ರುವರಿ 2025, 15:47 IST

ಬಾಳೆಹೊನ್ನೂರು: ಹಿರೇಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೊಪನಕೆರೆಯಲ್ಲಿ ಒಬ್ಬರಿಗೆ, ಕರ್ಕೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂವರು, ಬಾಳೆಹೊನ್ನೂರು ವ್ಯಾಪ್ತಿಯಲ್ಲಿ ಒಬ್ಬ ಸೇರಿ ಇದುವರೆಗೆ ಐವರಲ್ಲಿ ಕೆಎಫ್‌ಡಿ (ಮಂಗನ ಕಾಯಿಲೆ) ಸೋಂಕು ಪತ್ತೆಯಾಗಿದ್ದು, ನಾಲ್ವರು ಗುಣಮುಖರಾಗಿದ್ದಾರೆ.

‌ಕರ್ಕೆಶ್ವರ ಗ್ರಾಮದ ಒಬ್ಬರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗನ ಕಾಯಿಲೆ ಕಂಡು ಬಂದ ಗ್ರಾಮ ಪಂಚಾಯಿತಿಗಳಲ್ಲಿ ಆರೋಗ್ಯ ಇಲಾಖೆ ವತಿಯಿಂದ ಸಭೆ ನಡೆಸಿ ಜನರಲ್ಲಿ ಅರಿವು ಮೂಡಿಸಲಾಗಿದೆ. ಸೌದೆ, ಸೊಪ್ಪು ಸಂಗ್ರಹಕ್ಕೆ ಕಾಡಿಗೆ ತೆರಳುವವರಿಗೆ ಉಣುಗು ಕಚ್ಚದಂತೆ ಮೈ ಕೈಗೆ ಹಚ್ಚಲು ಎಣ್ಣೆ ಹಂಚಲಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT