ಸಾಂದರ್ಭಿಕ ಚಿತ್ರ
(ಎ.ಐ ಚಿತ್ರ)
ಚಿಕ್ಕಮಗಳೂರು: ಕಡೂರು ತಾಲ್ಲೂಕಿನ ಎಮ್ಮೆದೊಡ್ಡಿ ಬಳಿ ಜುಲೈ 31ರಂದು ನಡೆದಿದ್ದ ಚಿರತೆ ಸಾವಿನ ಕುರಿತ ತನಿಖೆಗೆ ಶಿವಮೊಗ್ಗ ಸಿಸಿಎಫ್ ನೇತೃತ್ವದಲ್ಲಿ ಇಲಾಖೆ ತಂಡ ರಚಿಸಿದೆ.
‘ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ವಲಯದ ದೇವಿಹಳ್ಳಿಯಲ್ಲಿ ಜುಲೈ 30ರಂದು ಸೆರೆ ಹಿಡಿದ ಚಿರತೆಯನ್ನು ಅದೇ ರಾತ್ರಿ ಎಮ್ಮೆದೊಡ್ಡಿ ಬಳಿ ಬಿಡಲಾಗಿದೆ. ಈ ವೇಳೆ ಅರಣ್ಯ ಇಲಾಖೆ ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಪಾಲಿಸಿಲ್ಲ’ ಎಂಬ ಅನುಮಾನ ವ್ಯಕ್ತವಾಗಿತ್ತು.
ಎಮ್ಮದೊಡ್ಡಿ ಬಳಿ ಜನರ ಮೇಲೆ ದಾಳಿ ಮಾಡಿದ್ದ ಚಿರತೆ ಸತ್ತಿದೆಯೇ, ಜನ ಕಲ್ಲು ತೂರಿದ ಚಿರತೆಯೇ ಎಂಬ ಬಗ್ಗೆ ತನಿಖೆ ನಡೆಸಿ ಏಳು ದಿನಗಳಲ್ಲಿ ವರದಿ ಸಲ್ಲಿಸಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಆದೇಶದಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.