
ಪ್ರಜಾವಾಣಿ ವಾರ್ತೆ
ತರೀಕೆರೆ: ಚಿಕ್ಕಮಗಳೂರು ನಗರದ ಎನ್.ಎಂ.ಸಿ. ವೃತ್ತದ ಸಮೀಪ ಮಲ್ಲಂದೂರು ರಸ್ತೆಯ ಎಟಿಐ ಕಾಂಪ್ಲೆಕ್ಸ್‌ನಲ್ಲಿರುವ ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಲಿಡ್ಕರ್ ಮಾರಾಟ ಮಳಿಗೆಯಲ್ಲಿ ‘ದಸರಾ ಮತ್ತು ದೀಪಾವಳಿ’ ಹಬ್ಬದ ಪ್ರಯುಕ್ತ ಲಿಡ್ಕರ್ ಉತ್ಪನ್ನಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು ಎಂದು ಸಂಸ್ಥೆಯ ಜಿಲ್ಲಾ ಸಂಯೋಜಕ ದಿನೇಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚರ್ಮದ ಶೂ, ಪಾದರಕ್ಷೆ, ಚರ್ಮದ ವ್ಯಾನಿಟಿ ಬ್ಯಾಗ್, ಪರ್ಸ್‌ಗಳು, ಲೆದರ್ ಬೆಲ್ಸ್‌ಗಳನ್ನು ಶೇ 20ರ ರಿಯಾಯಿತಿ ದರದಲ್ಲಿ ನೀಡಲಾಗುವುದು. ಮಳಿಗೆಯು ವಾರದ 7ದಿನವೂ ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೂ ತೆರೆದಿರುತ್ತದೆ. ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.