ADVERTISEMENT

ಪೂರ್ಣ ಲಾಕ್‌ಡೌನ್‌ 4 ದಿನ ಮುಂದುವರಿಕೆ; ಕೆಲ ಮಾರ್ಪಾಡು: ಜಿಲ್ಲಾಧಿಕಾರಿ ರಮೇಶ್‌

ಕಾಫಿನಾಡಿನಲ್ಲಿ ಕೋವಿಡ್‌ ಪ್ರಕರಣ ಇಳಿಕೆ

​ಪ್ರಜಾವಾಣಿ ವಾರ್ತೆ
Published 24 ಮೇ 2021, 5:16 IST
Last Updated 24 ಮೇ 2021, 5:16 IST
ಚಿಕ್ಕಮಗಳೂರಿನಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ರಮೇಶ್‌ ಮಾತನಾಡಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಕ್ಷಯ್‌ ಎಂ.ಹಾಕೆ, ಜಿಲ್ಲಾ ಪಂಚಾಯಿತಿ ಸಿಇಒ ಎಸ್‌.ಪೂವಿತಾ ಇದ್ದಾರೆ.
ಚಿಕ್ಕಮಗಳೂರಿನಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ರಮೇಶ್‌ ಮಾತನಾಡಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಕ್ಷಯ್‌ ಎಂ.ಹಾಕೆ, ಜಿಲ್ಲಾ ಪಂಚಾಯಿತಿ ಸಿಇಒ ಎಸ್‌.ಪೂವಿತಾ ಇದ್ದಾರೆ.   

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಇದೇ 28ರ ಬೆಳಿಗ್ಗೆ 6 ಗಂಟೆವರೆಗೆ ಪೂರ್ಣ ಲಾಕ್‌ಡೌನ್‌ ಮುಂದುವರಿಯಲ್ಲಿದ್ದು, ತುಸು ಮಾರ್ಪಾಡುಗಳನ್ನು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್‌.ರಮೇಶ್‌ ತಿಳಿಸಿದರು.

ನಾಲ್ಕು ದಿನಗಳಿಂದ ಪೂರ್ಣ ಲಾಕ್‌ಡೌನ್‌ಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಕೋವಿಡ್‌ ಪ್ರಕರಣಗಳು ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಹೀಗಾಗಿ, ಲಾಕ್‌ಡೌನ್‌ ಮುಂದುವರಿಸಿದರೆ ಪ್ರಕರಣಗಳ ಸಂಖ್ಯೆ ಇನ್ನಷ್ಟು ತಗ್ಗಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಮಾರ್ಪಾಡುಗಳು: ಬೆಳಿಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಹಣ್ಣು, ತರಕಾರಿಗಳನ್ನು ತಳ್ಳುವ ಗಾಡಿ ಮತ್ತು ವಾಹನಗಳಲ್ಲಿ ಮಾರಾಟಕ್ಕೆ ಮಾಡಲು ಅವಕಾಶ ನೀಡಲಾಗಿದೆ. ದಿನಸಿ ಅಂಗಡಿಯವರು ಅಂಗಡಿಗಳನ್ನು ತೆರೆಯುವಂತಿಲ್ಲ, ಮನೆಗಳಿಗೆ ದಿನಸಿ ತಲುಪಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ಹೋಟೆಲ್‌ ರೆಸ್ಟೊರೆಂಟ್‌ಗಳವರು ತೆರೆಯುವಂತಿಲ್ಲ. ಆದರೆ, ಆಹಾರವನ್ನು ಮನೆಗೆ ತಲುಪಿಸಲು ಅವಕಾಶ ಇದೆ. ರಸಗೊಬ್ಬರು, ಬಿತ್ತನೆ ಬೀಜಗಳನ್ನು ಕೃಷಿಕರ ಮನೆ ಬಾಗಿಲಿಗೆ ತಲುಪಿಸಲು ಅವಕಾಶ ಇದೆ ಎಂದರು.

ಕೃಷಿ ಚಟುವಟಿಕೆ ಪ್ರದೇಶದಲ್ಲಿರುವ ಕಾರ್ಮಿಕರು ಕೃಷಿ ಚಟುವಟಿಕೆ ಕೆಲಸಗಳಲ್ಲಿ ತೊಡಗಿಕೊಳ್ಳಲು ಅವಕಾಶ ಇದೆ. ಆದರೆ, ಒಂದೆಡೆಯಿಂದ ಇನ್ನೊಂದೆಡೆ ವಾಹನಗಳಲ್ಲಿ ಸಾಗಲು ಅವಕಾಶ ಇಲ್ಲ. ಅದೇ ರೀತಿ ಕಾಮಗಾರಿ ಪ್ರದೇಶದಲ್ಲಿರುವ ಇರುವ ಕೆಲಸಗಳಲ್ಲಿ ತೊಡಗಿಕೊಳ್ಳಲು ಅವಕಾಶ ಇದೆ ಎಂದರು.

ವಾಹನಗಳ ಓಡಾಟಕ್ಕೆ ಅವಕಾಶ ಇಲ್ಲ. ಅದೇ ಅಂಗಡಿ, ಮಳಿಗೆಗಳು, ವಾಣಿಜ್ಯ ಮತ್ತು ಕೈಗಾರಿಕಾ ಘಟಕಗಳು ತೆರೆಯಲು ಅವಕಾಶ ಇಲ್ಲ ಮೊದಲಾದ ನಿರ್ಬಂಧಗಳು ಮುಂದುವರಿಯಲಿವೆ. ಪೆಟ್ರೋಲ್‌ ಬಂಕ್‌, ಔಷಧಾಲಯ, ತುರ್ತುಸೇವೆಗಳಿಗೆ ಅವಕಾಶ ಇದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.