ADVERTISEMENT

ಚಿಕ್ಕಮಗಳೂರು: ದತ್ತ ಪಾದುಕೆಗೆ ಪೂಜೆ ಸಲ್ಲಿಸಿ ಪೂಜಾರಿ ಪ್ರಚಾರ ಆರಂಭ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2024, 5:04 IST
Last Updated 16 ಮಾರ್ಚ್ 2024, 5:04 IST
<div class="paragraphs"><p>ಕೋಟ ಶ್ರೀನಿವಾಸ ಪೂಜಾರಿ</p></div>

ಕೋಟ ಶ್ರೀನಿವಾಸ ಪೂಜಾರಿ

   

ಚಿಕ್ಕಮಗಳೂರು: ಉಡುಪಿ–ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರು ಶ್ರೀಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ದತ್ತ ಪಾದುಕೆಗೆ ದರ್ಶನ ಪಡೆದು ಚುನಾವಣಾ ಪ್ರಚಾರ ಆರಂಭಿಸಿದರು.

ಹನುಮಂತಪ್ಪ ವೃತ್ತದಲ್ಲಿ ರಸ್ತೆ ಬದಿಯ ಕ್ಯಾಂಟೀನ್‌ನಲ್ಲಿ ಬನ್ಸ್ ಮತ್ತು ಟೀ ಸವಿದ ಅವರು, ಶ್ರೀಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾಕ್ಕೆ ತೆರಳಿದರು. ಪಾದುಕೆಗೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ‘ದತ್ತ ಪಾದುಕೆ ದರ್ಶನ ಪಡೆದು ಭಾವುಕನಾಗಿದ್ದೇನೆ. ಈ ಕ್ಷಣದಿಂದ ಪ್ರಚಾರ ಆರಂಭವಾಗಲಿದೆ’ ಎಂದರು.

ADVERTISEMENT

‘28 ಲೋಕಸಭೆ ಕ್ಷೇತ್ರಗಳಿಗೆ ಟಿಕೆಟ್ ಹಂಚಿಕೆಯಾಗುವಾಗ ಅಪೇಕ್ಷೆಗಳು, ಬೇಡಿಕೆ ಇರುತ್ತವೆ. ಸಾಮಾಜಿಕ ನ್ಯಾಯಕ್ಕೆ ಅನುಗುಣವಾಗಿ ಟಿಕೆಟ್ ಹಂಚಿಕೆ ಮಾಡುವುದು ಪಕ್ಷದ ಜವಾಬ್ದಾರಿ. ಕೆ.ಎಸ್‌.ಈಶ್ವರಪ್ಪ ಅವರು ಪಕ್ಷದ ಹಿರಿಯ ನಾಯಕ. ರಾಷ್ಟ್ರ ಮತ್ತು ರಾಜ್ಯ ನಾಯಕರು ಅವರನ್ನು ಕರೆದು ಒಂದೆರಡು ದಿನಗಳಲ್ಲೇ ಸಮಾಧಾನ ಮಾಡಿ ಗೊಂದಲ ಪರಿಹರಿಸುವ ವಿಶ್ವಾಸ ಇದೆ’ ಎಂದು ಹೇಳಿದರು.

‘ಬಿಜೆಪಿ ದೊಡ್ಡ ರಾಜಕೀಯ ಪಕ್ಷವಾಗಿದ್ದು, ಟಿಕೆಟ್‌ಗೆ ಪೈಪೋಟಿ ಇರುವುದು ಸಾಮಾನ್ಯ. ಸಂಘಟನೆ ಗಟ್ಟಿಯಾಗಿದೆ ಎಂಬುದಕ್ಕೆ ಇದು ಸಾಕ್ಷಿ. ಉಡುಪಿ–ಚಿಕ್ಕಮಗಳೂರು ಕ್ಷೇತ್ರಕ್ಕೆ ಆಕಾಂಕ್ಷಿಯಾಗಿದ್ದ ಶೋಭಾ ಕರಂದ್ಲಾಜೆ, ಪ್ರಮೋದ್ ಮಧ್ವರಾಜ್ ಸೇರಿ ಎಲ್ಲರೂ ನನಗೆ ಶುಭ ಹಾರೈಸಿದ್ದಾರೆ. ಸಿ.ಟಿ.ರವಿ ಅವರ ಜತೆಗೂಡಿ ಕಾರ್ಯಕರ್ತರ ಸಭೆ ನಡೆಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.