ADVERTISEMENT

ಮೂಡಿಗೆರೆ: ಮರಿಯ ಜಯಂತಿ ಸಹಬಾಳ್ವೆ, ಸಹಕಾರ ಜೀವನದ ತತ್ವಗಳಾಗಲಿ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2022, 2:36 IST
Last Updated 9 ಸೆಪ್ಟೆಂಬರ್ 2022, 2:36 IST
ಮೂಡಿಗೆರೆಯ ಸಂತ ಅಂತೋಣಿ ಚರ್ಚ್ ನಲ್ಲಿ ಗುರುವಾರ ನಡೆದ ಮರಿಯಾ ಜಯಂತಿ ಅಂಗವಾಗಿ ಬಾಲಿಕಾ ಮರಿಯ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಾಯಿತು
ಮೂಡಿಗೆರೆಯ ಸಂತ ಅಂತೋಣಿ ಚರ್ಚ್ ನಲ್ಲಿ ಗುರುವಾರ ನಡೆದ ಮರಿಯಾ ಜಯಂತಿ ಅಂಗವಾಗಿ ಬಾಲಿಕಾ ಮರಿಯ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಾಯಿತು   

ಮೂಡಿಗೆರೆ: ತಾಲ್ಲೂಕಿನಾದ್ಯಂತ ಗುರುವಾರ ಕ್ರೈಸ್ತರು ಮಾತೆ ಮರಿಯ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಿದರು.

ಪಟ್ಟಣದ ಸಂತ ಅಂತೋಣಿ ಚರ್ಚ್ನಲ್ಲಿ ಬೆಳಿಗ್ಗೆ ಬಾಲಿಕಾ ಮರಿಯ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ, ಬಲಿಪೂಜೆ ಅರ್ಪಿಸಲಾಯಿತು. ಬಳಿಕ ಕಬ್ಬು ವಿತರಿಸಿ ಹೊಸಕ್ಕಿ ಸಹಬೋಜನ ನಡೆಸಲಾಯಿತು. ಹಬ್ಬದ ಅಂಗವಾಗಿ ಚರ್ಚ್ ನಲ್ಲಿ ವಿಶೇಷ ಪ್ರಾರ್ಥನೆ ಮಾಡಲಾಯಿತು.

ಪಾಳ್ಯ ಚರ್ಚ್‌ ಧರ್ಮಗುರು ಫಾ. ಸಿರಿಲ್ ಆನಂದ್ ಮಾತನಾಡಿ ‘ಮಾತೆ ಮರಿಯ ಅವರ ದಾರಿಯಲ್ಲಿ ನಾವೆಲ್ಲರೂ ಸಾಗಬೇಕಿದೆ. ಈ ಹಬ್ಬದ ಮೂಲಕ ಹೊಸಕ್ಕಿಯನ್ನು ಸೇವಿಸಿ ಕುಟುಂಬದವರೆಲ್ಲಾ ಅನೋನ್ಯವಾಗಿ ಬದದುಕುವ ಸಂದೇಶವನ್ನು ಜಗತ್ತಿಗೆ ಸಾರಬೇಕಿದೆ’ ಎಂದರು.

ADVERTISEMENT

ಸಂತ ಅಂತೋಣಿ ಚರ್ಚ್ ಧರ್ಮಗುರು ಸುನೀಲ್ ರೋಡ್ರಿಗಸ್ ಮಾತನಾಡಿ, ‘ಸಮಾಜದಲ್ಲೂ ಏಕತೆಗಾಗಿ ದುಡಿಯಬೇಕು. ಸಮಾಜದಲ್ಲಿ ನಮಗಿಂತ ಕೆಳಹಂತದಲ್ಲಿರುವ ವ್ಯಕ್ತಿಗಳನ್ನು ಕೈ ಹಿಡಿದು ಎತ್ತುವ ಕೆಲಸ ಮಾಡಬೇಕು ’ ಎಂದರು.

ಮಾತೆ ಮರಿಯ ಅವರಿಗೆ ಉಡಿಸಿದ್ದ ಸೀರೆ ಹರಾಜು ನಡೆಸಲಾಯಿತು. ದೇವಾಲಯದ ಒಳಭಾಗ ಹಾಗೂ ಬಾಲಿಕ ಮಾತೆ ಮರಿಯ ಪ್ರತಿಮೆಯನ್ನು ಆಕರ್ಷಕ ಅಲಂಕಾರ ಮಾಡಲಾಗಿತ್ತು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.