ADVERTISEMENT

ಋತ್ವಿಕ್ ಮನೆಗೆ ಸಚಿವೆ ಶೋಭಾ ಭೇಟಿ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2022, 16:23 IST
Last Updated 13 ಆಗಸ್ಟ್ 2022, 16:23 IST
ಬೀರ್ಗೂರು ಗ್ರಾಮದ ಬಾಲಕ ಋತ್ವಿಕ್ ಮನೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ಬಾಲಕನ ಆರೋಗ್ಯ ವಿಚಾರಿಸಿದರು.
ಬೀರ್ಗೂರು ಗ್ರಾಮದ ಬಾಲಕ ಋತ್ವಿಕ್ ಮನೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ಬಾಲಕನ ಆರೋಗ್ಯ ವಿಚಾರಿಸಿದರು.   

ಕೊಟ್ಟಿಗೆಹಾರ: ತಲಸ್ಸೇಮಿಯಾದಿಂದ ಬಳಲುತ್ತಿರುವ ಬಾಲಕ ಬೀರ್ಗೂರಿನ ಋತ್ವಿಕ್ ಮನೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಬಾಲಕನ ಚಿಕಿತ್ಸೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೂಲಕ ಆರ್ಥಿಕ ನೆರವು ನೀಡಲು ಪ್ರಯತ್ನಿಸಲಾಗುವುದು. ಬಾಲಕನ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಹಣ ಬೇಕಾಗಿರುವುದರಿಂದ ಆಸ್ಪತ್ರೆಯ ಮುಖ್ಯಸ್ಥರಲ್ಲಿ ಮಾತನಾಡಿ, ಚಿಕಿತ್ಸೆಯ ವೆಚ್ಚವನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗುವುದು. ಈಗಾಗಲೇ ಬಾಲಕನಿಗಾಗಿ ಹಣದ ಸಂಗ್ರಹ ಮಾಡಿರುವ ಬಗ್ಗೆ ವರದಿಯಾಗಿದೆ. ಚಿಕಿತ್ಸೆಗೆ ಸಾಧ್ಯವಾದಷ್ಟು ಸಹಾಯ ಮಾಡುವೆ’ ಎಂದರು.

ಶಾಸಕ ಎಂ.ಪಿ.ಕುಮಾರಸ್ವಾಮಿ, ತಹಶೀಲ್ದಾರ್ ಎಂ.ಎ.ನಾಗರಾಜ್, ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ, ತಾಲ್ಲೂಕು ಘಟಕದ ಅಧ್ಯಕ್ಷ ರಘು ಜನ್ನಾಪುರ, ಹೋಬಳಿ ಅಧ್ಯಕ್ಷ ಎಂ.ಎಲ್ ವಿಜೇಂದ್ರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಾ ದಿನೇಶ್, ಉಪಾಧ್ಯಕ್ಷೆ ಉಮಾ ದಿನೇಶ್, ಸದಸ್ಯರಾದ ಶಿವರಾಜ್, ರಾಜೇಶ್, ದಿನಕರ್, ದಿನಕರ್ ಪೂಜಾರಿ, ಶಶಿಧರ್, ನವೀನ್ ಹಾವಳಿ, ಮುಖಂಡರಾದ ಬಿ.ಎಂ.ಭರತ್, ಪರೀಕ್ಷಿತ್ ಜಾವಳಿ, ಶಶಿಕುಮಾರ್, ಸಂಜಯ್‍ ಕೊಟ್ಟಿಗೆಹಾರ, ಸುಮಿತ್ರಾ, ಸತೀಶ್, ಆದರ್ಶ್ ತರುವೆ, ಗಿರೀಶ್, ರಚನ್, ಆರ್‌ಐ ಬಾಬು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.