
ಮೂಡಿಗೆರೆ: ತಾಲ್ಲೂಕಿನ ಜಾವಳಿ ಗ್ರಾಮದಲ್ಲಿರುವ ಹೇಮಾವತಿ ನದಿ ಮೂಲದ ಮಹಾಗಣಪತಿ ದೇವಾಲಯದಲ್ಲಿ ಗುರುವಾರ ವಾರ್ಷಿಕ ಜಾತ್ರೆ ಅಂಗವಾಗಿ ಮಹಾಗಣಪತಿಯ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ನಡೆಯಿತು.
ಉತ್ಸವದ ಅಂಗವಾಗಿ ಬೆಳಿಗ್ಗೆ ದೇವಾಲಯದಲ್ಲಿ ಗಣಪತಿ ಹೋಮ, ವಿಶೇಷಪೂಜೆ, ಪಲ್ಲಕ್ಕಿ ಉತ್ಸವಗಳು ನಡೆದವು. ಮಧ್ಯಾಹ್ನ ಸಾಮೂಹಿಕ ಅನ್ನ ಸಂತರ್ಪಣೆ ನಡೆಸಲಾಯಿತು.
ಸುತ್ತಮುತ್ತಲಿನ ಗ್ರಾಮಗಳಲ್ಲಿ ಹೇಮಾವತಿ ಜಾತ್ರೆ ಎಂದೇ ಪ್ರಸಿದ್ಧಿ ಪಡೆದಿರುವ ಈ ಜಾತ್ರೆಗೆ ಜಾವಳಿ, ಸುಂಕಸಾಲೆ, ಬಾಳೂರು, ಕೂವೆ, ನಿಡುವಾಳೆ, ಕೊಟ್ಟಿಗೆಹಾರ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಸಾವಿರಾರು ಭಕ್ತರು ಭಾಗವಹಿಸಿದ್ದರು.
ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ನಿಶಾಂತ್ ಗುರ್ಜರ್, ಉಪಾಧ್ಯಕ್ಷ ಯಶವಂತ್ ಗುರ್ಜರ್, ಕಾರ್ಯದರ್ಶಿ ಎಂ.ವಿ. ಜಗದೀಶ್ ಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಪಿ.ಪ್ರದೀಪ್, ಕಾಂಗ್ರೆಸ್ ನಾಯಕಿ ಮೋಟಮ್ಮ, ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ, ಪರೀಕ್ಷಿತ್ ಜಾವಳಿ ದೇವಸ್ಥಾನ ಸಮಿತಿಯ ಚೆನ್ನಕೇಶವಗೌಡ, ಶಶಿಧರ್, ವಾಟೇಖಾನ್ ಶ್ರೀನಾಥ್, ಎಂ.ಪಿ.ನಾರಾಯಣಗೌಡ, ಸತೀಶ್ ಮಲೆಮನೆ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮನೋಹರ್, ಪಿಡಿಓ ದುಗ್ಗಮ್ಮ, ಕಾರ್ಯದರ್ಶಿ ಸವಿತಾ, ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಚಂದ್ರಶೇಖರ್, ಸಂಜೀವ್ ಕೋಟ್ಯಾನ್, ಸಂಪತ್, ಅರ್ಚಕರಾದ ಅವಿನಾಶ್ ಭಟ್, ಕೃಷ್ಣಮೂರ್ತಿ, ಉದೇಶ್ ಕಾರಂತ್, ಚರಣ್ ಕಾರಂತ್, ಶ್ರೀನಿವಾಸ್ ಭಟ್ ಸೇರಿ ಹಲವಾರು ಮುಖಂಡರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.