ADVERTISEMENT

ಆಲ್ದೂರುನಲ್ಲಿ ಕಾಡಾನೆಗಳ ಸಂಚಾರ: ಜನರಲ್ಲಿ ಆತಂಕ

ಕಾಫಿ ಎಸ್ಟೇಟ್‌ನಲ್ಲಿ ಕಾಣಿಸಿಕೊಂಡ ಆನೆಗಳು ಮತ್ತೆ ಹಕ್ಕಿಮಕ್ಕಿ ಮಾರ್ಗದತ್ತ

​ಪ್ರಜಾವಾಣಿ ವಾರ್ತೆ
Published 8 ಮೇ 2025, 15:31 IST
Last Updated 8 ಮೇ 2025, 15:31 IST
ಕಾಫಿ ತೋಟದಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳ ಹಿಂಡು
ಕಾಫಿ ತೋಟದಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳ ಹಿಂಡು    

ಆಲ್ದೂರು: ಹೋಬಳಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಣಿಸಿಕೊಂಡಿರುವ 22 ಕಾಡಾನೆಗಳ ಗುಂಪು ನಿರಂತರವಾಗಿ ಒಂದೆಡೆಯಿಂದ ಇನ್ನೊಂದೆಡೆ ಸಂಚರಿಸುತ್ತಿದ್ದು, ಜನರಲ್ಲಿ ಆತಂಕ ಮನೆಮಾಡಿದೆ.

ಬುಧವಾರ ಅರೇನೂರು, ಹಕ್ಕಿಮಕ್ಕಿ ದೇವರಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿದ್ದ ಕಾಡಾನೆಗಳು ಗುರುವಾರ ಬನ್ನೂರು ಕೆಂದಳಹಕ್ಲು, ಕಾಫಿ ಎಸ್ಟೇಟ್‌ನಲ್ಲಿ ಕಾಣಿಸಿಕೊಂಡು, ಮತ್ತೆ ಹಕ್ಕಿಮಕ್ಕಿ ಮಾರ್ಗದಲ್ಲಿ ತೆರಳಿವೆ.

ವಲಯ ಅರಣ್ಯ ಅಧಿಕಾರಿ ಹರೀಶ್, ಕಾಡಾನೆಗಳು ಸಂಚರಿಸುವ ಮಾರ್ಗದ ಕಾಫಿ ತೋಟಗಳ ಮಾಲೀಕರು, ಆ ಭಾಗದ ಸಾರ್ವಜನಿಕರಿಗೆ ಎಚ್ಚರಿಕೆಯ ಮಾಹಿತಿ ರವಾನಿಸಲಾಗಿದೆ. ಆನೆಗಳ ಚಲನವಲನವನ್ನು ಅರಣ್ಯ ಅಧಿಕಾರಿಗಳು, ಸಿಬ್ಬಂದಿ ಗಮನಿಸುತ್ತಿದ್ದಾರೆ. ಗಜ ಕ್ರಿಯಾ ಪಡೆ ಮತ್ತು ಡ್ರೋನ್ ಸಹಾಯದಿಂದ ನಿರಂತರ ನಿಗಾ ವಹಿಸಲಾಗಿದ್ದು, ಈಗಾಗಲೇ ಕರೆಸಿರುವ ಕುಮ್ಕಿ ಆನೆಗಳ ಮೂಲಕ ಭದ್ರಾ ಹುಲಿ ಸಂರಕ್ಷಿತ ಅರಣ್ಯಕ್ಕೆ ಓಡಿಸುವ ಕಾರ್ಯಾಚರಣೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

ADVERTISEMENT

ಆನೆಗಳ ಓಡಾಟ ಇರುವುದರಿಂದ ಅರೆನೂರು, ಹಕ್ಕಿಮಕ್ಕಿ, ಐದಳ್ಳಿ, ಮಾಗೋಡು, ಕಣತಿ, ಬನ್ನೂರು ಭಾಗಗಳ ಕಾಫಿ ತೋಟಗಳ ಕಾರ್ಮಿಕರಿಗೆ ಕೆಲ ಮಾಲೀಕರು ಮಾತ್ರ ರಜೆ ನೀಡಿದ್ದಾರೆ. ಅರಣ್ಯ ಇಲಾಖೆ ನೀಡುವ ಎಚ್ಚರಿಕೆಯನ್ನು ಪಾಲಿಸಿದರೆ ಯಾವುದೇ ಜೀವ ಹಾನಿಯಾಗುವುದಿಲ್ಲ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.