ನರಸಿಂಹರಾಜಪುರ: ಪಟ್ಟಣದ ಶಾರದಾ ವಿಧ್ಯಾಮಂದಿರದ ಸಮೀಪವಿರುವ ದುರಸ್ಥಿ ಪಡಿಸುತ್ತಿರುವ ಕೆರೆಯ ನೀರಿನಲ್ಲಿ ಸಿಲುಕಿ ಕೊಂಡಿದ್ದ ಕರುವನ್ನು ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ರಕ್ಷಿಸಿದರು.
ಸೋಮವಾರ ಮಧ್ಯಾಹ್ನ 1ರವೇಳೆಗೆ ಮಾಹಿತಿ ಬರುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಅಗ್ನಿ ಶಾಮಕ ಇಲಾಖೆಯ ಸಿಬ್ಬಂದಿ ನೀರಿನಲ್ಲಿ ಮುಳುಗುತ್ತಿದ್ದ ಕರುವನ್ನು ರಕ್ಷಿಸಿದ್ದಾರೆ.
ಕರುವಿನ ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಇಲಾಖೆಯ ಪಿ.ರಮೇಶ್, ಚಾಲಕ ಬಸವರಾಜ್ ಮೇಟಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.