ಬಿ.ಎಚ್.ಕೈಮರ(ಎನ್.ಆರ್.ಪುರ): ನಾರಾಯಣ ಗುರುಗಳು ಶೋಷಿತರ, ದೀನ ದಲಿತರಿಗಾಗಿ ತಮ್ಮ ಬದುಕನ್ನೇ ಮುಡುಪಾಗಿಟ್ಟಿದ್ದರು ಎಂದು ಜಿಲ್ಲಾ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘಗಳ ಒಕ್ಕೂಟದ ಅಧ್ಯಕ್ಷ ಎಚ್.ಎಂ.ಸತೀಶ್ ತಿಳಿಸಿದರು.
ಇಲ್ಲಿನ ನಾರಾಯಣಗುರು ಸಮುದಾಯ ಭವನದಲ್ಲಿ ಶುಕ್ರವಾರ ನಾರಾಯಣಗುರು ಸಂದೇಶ ರಥಯಾತ್ರೆ ಸ್ವಾಗತಿಸಿ ಅವರು ಮಾತನಾಡಿದರು.
ಸಂಘದ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಹಾತೂರು ಪ್ರಭಾಕರ್ ಮಾತನಾಡಿ, ನಾರಾಯಣ ಗುರುಗಳು ತಮ್ಮ ಸಂದೇಶಗಳಲ್ಲಿ ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು ಎಂದು ಸಾರಿದ್ದರು. ಜಾತಿ ಪದ್ಧತಿ ನಿರ್ಮೂಲನೆ ಹೋರಾಟ ಮಾಡಿದವರಲ್ಲಿ ನಾರಾಯಣಗುರುಗಳು ಪ್ರಮುಖರಾಗಿದ್ದರು ಎಂದರು.
ಸಂಘಗಳ ಒಕ್ಕೂಟದ ಕಾರ್ಯದರ್ಶಿ ವಾಸು ಪೂಜಾರಿ, ಕಾರ್ಯದರ್ಶಿ ಗಣೇಶ, ತಾಲ್ಲೂಕು ನಾರಾಯಣಗುರು ಸಮಾಜ ಸೇವಾ ಸಂಘದ ಉಪಾಧ್ಯಕ್ಷ ನಾರಾಯಣ ಪೂಜಾರಿ, ಮಹಿಳಾ ಸಂಘದ ಅಧ್ಯಕ್ಷೆ ಪ್ರೇಮ, ಮುಖಂಡರಾದ ಎಂ.ವಿ.ರಮೇಶ, ದೇವರಾಜ್, ಶಂಕರಶಾಂತ, ಜಾನಕಿ, ಹೊನಗಾರು ರಮೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.