ಚಿಕ್ಕಮಗಳೂರು: ಬ್ರಹ್ಮಶ್ರೀ ನಾರಾಯಣ ಗುರು ಅವರ 171ನೇ ಜಯಂತ್ಯುತ್ಸವವನ್ನು ನಗರದ ಜಿಲ್ಲಾ ಶ್ರೀನಾರಾಯಣಗುರು ಸಂಘದ ಕಚೇರಿಯಲ್ಲಿ ಭಾನುವಾರ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಘದ ಅಧ್ಯಕ್ಷ ಕೃಷ್ಣಪ್ಪ ದಾಸರಹಳ್ಳಿ, ‘ನಾರಾಯಣ ಗುರು ಸಮುದಾಯ ಭವನ ನಿರ್ಮಿಸಲು ಸಮಾಜದವರು ಇಚ್ಚಿಸಿದ್ದು, ಭವನ ನಿರ್ಮಾಣಕ್ಕೆ ₹4.50 ಕೋಟಿ ಬೇಕಿದೆ. ಸಮಾಜದ ನೆರವಿನಿಂದ ₹45 ಲಕ್ಷ ದೇಣಿಗೆಯಲ್ಲಿ ಭವನಕ್ಕೆ ತಳಪಾಯ ನಿರ್ಮಿಸಲಾಗಿದೆ’ ಎಂದರು.
‘ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ₹10 ಲಕ್ಷ ಅನುದಾನ, ಶಾಸಕ ಎಚ್.ಡಿ ತಮ್ಮಯ್ಯ ತಮ್ಮ ಅನುದಾನದಲ್ಲಿ ₹10 ಲಕ್ಷ ಬಿಡುಗಡೆ ಮಾಡಿದ್ದಾರೆ. ಬಿ.ಕೆ ಹರಿಪ್ರಸಾದ್ ಅವರು ಇನ್ನೂ ಹೆಚ್ಚಿನ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಭವನ ನಿರ್ಮಾಣಕ್ಕೆ ಸಮುದಾಯದ ಎಲ್ಲರೂ ಹೆಚ್ಚಿನ ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.
ಭವನ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಸದ್ಯದಲ್ಲೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದರು.
ಜಯಂತಿ ಅಂಗವಾಗಿ ನಾರಾಯಣಗುರು ಭಾವಚಿತ್ರಕ್ಕೆ ಸಾಮೂಹಿಕವಾಗಿ ಪುಷ್ಪ ನಮನ ಸಲ್ಲಿಸಲಾಯಿತು. ಗೌರವ ಅಧ್ಯಕ್ಷರಾದ ಶಾಂತ್‌ಕುಮಾರ್, ಗುಣಶೇಖರ್, ಉಪಾಧ್ಯಕ್ಷರಾದ ಎಲ್.ಸಿ. ಚಂದ್ರು, ಸಿ.ಆರ್. ಕುಮಾರ್, ಅಯ್ಯಪ್ಪ, ಚಂದ್ರು ಕೋಟೆ, ಕಾರ್ಯದರ್ಶಿ ಶ್ರೀನಿವಾಸ್ ಮಾಯಪ್ಪ, ಖಜಾಂಚಿ ಸುರೇಶ್, ಮಹಿಳಾ ಘಟಕದ ಅಧ್ಯಕ್ಷೆ ಶಶಿಕಲಾ, ಪದಾಧಿಕಾರಿಗಳಾದ ಶ್ರೀಧರ್, ಹರೀಶ್, ರಾಮು, ಪ್ರೇಮಲತಾ, ತಾರಾಕೃಷ್ಣ, ಪದ್ಮಾವತಿ, ಸುಧಾ ಅಯ್ಯಪ್ಪ, ಗಿರಿಜಾ, ಮಂಜುಳಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.