ADVERTISEMENT

ನೂತನ ದೇವಾಲಯ ಕಳಶಾರೋಹಣ

​ಪ್ರಜಾವಾಣಿ ವಾರ್ತೆ
Published 17 ಮೇ 2024, 16:27 IST
Last Updated 17 ಮೇ 2024, 16:27 IST
ತಾಲ್ಲೂಕಿನ ಮಚ್ಚೇರಿಯಲ್ಲಿ ನೂತನ ದೇವಸ್ಥಾನದ ಕಳಶಾರೋಹಣವನ್ನು ಹುಣಸಘಟ್ಟದ ಹಾಲು ಮಠದ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ನೆರವೇರಿಸಿದರು.
ತಾಲ್ಲೂಕಿನ ಮಚ್ಚೇರಿಯಲ್ಲಿ ನೂತನ ದೇವಸ್ಥಾನದ ಕಳಶಾರೋಹಣವನ್ನು ಹುಣಸಘಟ್ಟದ ಹಾಲು ಮಠದ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ನೆರವೇರಿಸಿದರು.   

ಕಡೂರು: ತಾಲ್ಲೂಕಿನ ಮಚ್ಚೇರಿಯಲ್ಲಿ ನೂತನವಾಗಿ ನಿರ್ಮಿಸಿರುವ ಮೈಲಾರಲಿಂಗೇಶ್ವರ- ಗಂಗಾಮಾಳಮ್ಮ ದೇವಸ್ಥಾನದ ಕಳಶಾರೋಹಣ ಶುಕ್ರವಾರ ನಡೆಯಿತು.

ಹುಣಸಘಟ್ಟದ ಹಾಲು ಮಠದ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ಗೋಪುರ ಕಳಶಾರೋಹಣ ಮತ್ತು ಪ್ರಥಮ‌ ಕುಂಬಾಭಿಷೇಕ ನೆರವೇರಿಸಿದರು. ಸುಮಂಗಲಿಯರು ಹೊಳೆ ಪೂಜೆ ನಡೆಸಿ ಗಂಗೆಯನ್ನು ಹೊತ್ತು ತಂದರು. ದೇವಸ್ಥಾನದಲ್ಲಿ ಕಳಾ ಹೋಮ ಮತ್ತಿತರ ಸಾಂಪ್ರದಾಯಿಕ ವಿಧಿ ವಿಧಾನಗಳನ್ನು‌ ಪುರೋಹಿತ ದೇವೀಪ್ರಸಾದ ಶರ್ಮ ಮತ್ತು ಸಂಗಡಿಗರು ನೆರವೇರಿಸಿದರು. ಗ್ರಾಮಸ್ಥರಿಂದ ದೋಣಿಸೇವೆ ನಡೆಯಿತು.

ಗುರುಮೂರ್ತಿ ಸ್ವಾಮೀಜಿ ಮಾತನಾಡಿ, ‘ದೇವಸ್ಥಾನಗಳು ನಮ್ಮ ಮನಸ್ಸನ್ನು ಧರ್ಮ ಮಾರ್ಗದಲ್ಲಿ ನಡೆಯಲು‌ ಪ್ರೇರೇಪಿಸುತ್ತವೆ. ದೇವಸ್ಥಾನಗಳನ್ನು ಕಟ್ಟಿದರಷ್ಟೆ ಸಾಲದು. ಆ ಸ್ಥಳದಲ್ಲಿರುವ ಮಹತ್ವ ಮತ್ತು ಸಕಾರಾತ್ಮಕ ಶಕ್ತಿಯ ಪೂರ್ಣ ಪ್ರಯೋಜನವನ್ನು ಎಲ್ಲರೂ ಪಡೆಯಬೇಕು’ ಎಂದರು. ಎಂ.ಕೆ.ಚಂದ್ರಪ್ಪ, ಸಮಿತಿ ಅಧ್ಯಕ್ಷ ಎಂ.ಎಚ್.ರವಿ, ಗ್ರಾಮ ಪಂಚಾಯಿತಿ ಸದಸ್ಯ ಚೆನ್ನಪ್ಪ, ಪೂಜಾರಿ ಬಸವರಾಜು, ಎಂ.ಟಿ.ಮಂಜುನಾಥ್, ಎಂ.ಎನ್.ಓಂಕಾರ್, ದೇವಸ್ಥಾನದ ಸಮಿತಿ ಸದಸ್ಯರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.