ADVERTISEMENT

ಕೊಪ್ಪ | ನೋ ಪಾರ್ಕಿಂಗ್: ಜಿ.ಪಂ.ವಾಹನ ಚಾಲಕನಿಗೆ ದಂಡ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 3:02 IST
Last Updated 19 ಆಗಸ್ಟ್ 2025, 3:02 IST
ಕೊಪ್ಪ ಪಟ್ಟಣದ ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ಸರ್ಕಾರಿ ವಾಹನದ ಚಕ್ರಕ್ಕೆ ಪೊಲೀಸರು ಲಾಕ್ ಅಳವಡಿಸಿದ್ದರು
ಕೊಪ್ಪ ಪಟ್ಟಣದ ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ಸರ್ಕಾರಿ ವಾಹನದ ಚಕ್ರಕ್ಕೆ ಪೊಲೀಸರು ಲಾಕ್ ಅಳವಡಿಸಿದ್ದರು   

ಕೊಪ್ಪ: ಪಟ್ಟಣದ ಬಸ್ ನಿಲ್ದಾಣದ ಬಳಿ ಇರುವ ಆಟೊ ಸ್ಟ್ಯಾಂಡ್ ಎದುರಿನ ರಸ್ತೆ ಪಕ್ಕದ ನೋ ಪಾರ್ಕಿಂಗ್ ಜಾಗದಲ್ಲಿ ಸೋಮವಾರ ನಿಲ್ಲಿಸಿದ್ದ ಸರ್ಕಾರಿ ವಾಹನಕ್ಕೆ ಕೊಪ್ಪ ಪೊಲೀಸರು ದಂಡ ವಿಧಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಬಳಕೆಯಲ್ಲಿರುವ ಬೊಲೆರೋ ಜೀಪ್‌ನ ಚಕ್ರಕ್ಕೆ ಪೊಲೀಸರು ಲಾಕ್ ಅಳವಡಿಸಿದ್ದರು. ಈ ವೇಳೆ ಪೊಲೀಸರು ವಾಹನ ಚಾಲಕ ವಿಷ್ಣು ಅವರಿಗೆ ₹ 500 ದಂಡ ವಿಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

'ಪಟ್ಟಣದಲ್ಲಿ ವಾಹನ ಪಾರ್ಕಿಂಗ್ ಮಾಡಲು ಸೂಕ್ತ ಜಾಗದ ಕೊರತೆಯಿಂದ ವಾಹನ ಸವಾರರು ಎಲ್ಲೆಂದರಲ್ಲಿ ನಿಲ್ಲಿಸುತ್ತಾರೆ. ಸಂಬಂಧಿಸಿದ ಇಲಾಖೆ, ಪಟ್ಟಣ ಪಂಚಾಯಿತಿ ವಾಹನ ಪಾರ್ಕಿಂಗ್ ಮಾಡಲು ಸೂಕ್ತ ಸ್ಥಳಾವಕಾಶ ಮಾಡಿಕೊಡಬೇಕು' ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.