ADVERTISEMENT

ಅಂತರ್‌ಧರ್ಮೀಯ ಮದುವೆಗೆ ಅಡ್ಡಿ: ದಲಿತರ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2022, 13:47 IST
Last Updated 16 ಸೆಪ್ಟೆಂಬರ್ 2022, 13:47 IST
   

ಚಿಕ್ಕಮಗಳೂರು: ‘ಉಪನೋಂದಣಾಧಿಕಾರಿ ಕಚೇರಿಗೆ ಮದುವೆಯಾಗಲು ಲಕ್ಷ್ಮಿಪುರದ ಜಾಫರ್‌ ಮತ್ತು ಚೈತ್ರಾ ಬಂದಿದ್ದ ಮಾಹಿತಿಯನ್ನು ಬಜರಂಗದಳವರಿಗೆ ನೀಡಿದ್ದು ಯಾರು ಎಂಬುದನ್ನು ಪತ್ತೆ ಹಚ್ಚಬೇಕು, ದಲಿತ ಯುವತಿ ಚೈತ್ರಾ ಅವರನ್ನು ಎಳೆದಾಡಿದವರ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು’ ಎಂದು ಮಾನವ ಸಂರಕ್ಷಣೆ ವೇದಿಕೆಯ ಅಧ್ಯಕ್ಷ ಹೊನ್ನೇಶ್‌ ಒತ್ತಾಯಿಸಿದರು.

‘ಉಪನೋಂದಣಾಧಿಕಾರಿ ಕಚೇರಿಯ ಅಧಿಕಾರಿಗಳ ವಿಚಾರಣೆ ನಡೆಸಬೇಕು. ಮಾಹಿತಿ ನೀಡಿದ ಮಧ್ಯವರ್ತಿಯನ್ನು ಪತ್ತೆ ಮಾಡಬೇಕು’ ಎಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ದಂಟರಮಕ್ಕಿ ಶ್ರೀನಿವಾಸ್ ಮಾತನಾಡಿ, ‘ಮದುವೆಗೆ ಅಡ್ಡಿಪಡಿಸಿದ ಪ್ರಕರಣದಲ್ಲಿ ಉಪನೋಂದಣಾಧಿಕಾರಿ ಶಾಮೀಲಾಗಿರುವ ಶಂಕೆ ಇದೆ. ಪೊಲೀಸರ ಪಾತ್ರವೂ ಇದೆ. ಕಚೇರಿಯಲ್ಲಿ ಗಲಾಟೆ ನಡೆದ ಕುರಿತು ಸಮಗ್ರ ತನಿಖೆ ನಡೆಸಬೇಕು. ಎಂಟು ದಿನಗಳೊಳಗ…

ADVERTISEMENT

‘ಜಾಫರ್‌ಗೆ ಬೆದರಿಕೆ ಹಾಕಿ, ‘ನಿನ್ನನ್ನು ಮದುವೆಯಾಗಲ್ಲ, ನೀನು (ಚೈತ್ರಾ) ಹಿಂದು ಹುಡುಗನನ್ನು ಮದುವೆಯಾಗು, ನಾನು (ಜಾಫರ್‌) ಮುಸ್ಲಿಂ ಹುಡುಗಿಯನ್ನು ಮದುವೆಯಾಗುತ್ತೇನೆ’ ಎಂದು ಫೋನ್‌ನಲ್ಲಿ ಹೇಳಿಸಿದ್ದಾರೆ’ ಎಂದು ದೂರಿದರು.

‘ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಘಟನೆ ಕುರಿತು ವಿವರಿಸಿದ್ದೇನೆ. ಬಜರಂಗದಳದಿಂದ ತೊಂದರೆ ಆಗಬಹುದು ಎಂದು ಹೇಳಿ ಪೊಲೀಸರು ನನ್ನನ್ನು ಕಸ್ತೂರಬಾ ಸದನದಲ್ಲಿ ಒಂದು ದಿನ ಇರಿಸಿದ್ದರು’ ಎಂದು ತಿಳಿಸಿದರು. ‌

‘ಮೂರು ವರ್ಷಗಳಿಂದ ಪ್ರೀತಿಸಿದ್ದೇವೆ. ಮನೆಯವರು ಒಪ್ಪಿದ್ದಾರೆ. ಮದುವೆಯಾಗುತ್ತೇವೆ. ಅದನ್ನು ಕೇಳಲು ಇವರಾರು?’ ಎಂದು ಪ್ರಶ್ನಿಸಿದರು.

‘ಹಲ್ಲೆ, ಜೀವ ಬೆದರಿಕೆ’
ಜಾಫರ್‌ ಮಾತನಾಡಿ, ‘ನನಗೆ ಮೇಲೆ ಹಲ್ಲೆ ಮಾಡಿದ್ದಾರೆ. ಜೀವ ಬೆದರಿಕೆ ಹಾಕಿದ್ದಾರೆ’ ಎಂದು ದೂರಿದರು.

‘ಮೊದಲು ಗ್ರಾಮಾಂತರ ಠಾಣೆ ಕರೆದೊಯ್ದು, ಅಲ್ಲಿಂದ ಮೈದಾನಕ್ಕೆ ಕರೆದೊಯ್ದರು ಬಜರಂಗ ದಳದ ನಾಲ್ವರು ಹೆದರಿಸಿದರು. ‘ಹಿಂದು ಹುಡುಗಿಯನ್ನು ಮದುವೆಯಾಗಲ್ಲ, ಯಾರು ಹೊಡೆದಿಲ್ಲ’ ಎಂದು ನನ್ನಿಂದ ಹೇಳಿಸಿ ಫೋನ್‌ನಲ್ಲಿ ವಿಡಿಯೋ ಮಾಡಿಕೊಂಡರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.