ADVERTISEMENT

ಧರ್ಮಸ್ಥಳಕ್ಕೆ ಪಾದಯಾತ್ರೆ: ಹೆಚ್ಚಿದ ವ್ಯಾಪಾರ, ವಹಿವಾಟು

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2025, 12:49 IST
Last Updated 24 ಫೆಬ್ರುವರಿ 2025, 12:49 IST
ಮೂಡಿಗೆರೆ ತಾಲ್ಲೂಕಿನ ಮುಗ್ರಹಳ್ಳಿ ಗ್ರಾಮದಲ್ಲಿರುವ ಅಗ್ನಿಶಾಮಕ ದಳದ ಸಿಬ್ಬಂದಿ ಧರ್ಮಸ್ಥಳಕ್ಕೆ ತೆರಳುತ್ತಿರುವ ಪಾದಯಾತ್ರಿಗಳಿಗೆ ಪಾನಕ, ಮಜ್ಜಿಗೆ, ಹಣ್ಣು ವಿತರಿಸಿದರು
ಮೂಡಿಗೆರೆ ತಾಲ್ಲೂಕಿನ ಮುಗ್ರಹಳ್ಳಿ ಗ್ರಾಮದಲ್ಲಿರುವ ಅಗ್ನಿಶಾಮಕ ದಳದ ಸಿಬ್ಬಂದಿ ಧರ್ಮಸ್ಥಳಕ್ಕೆ ತೆರಳುತ್ತಿರುವ ಪಾದಯಾತ್ರಿಗಳಿಗೆ ಪಾನಕ, ಮಜ್ಜಿಗೆ, ಹಣ್ಣು ವಿತರಿಸಿದರು   

ಮೂಡಿಗೆರೆ: ಶಿವರಾತ್ರಿ ಅಂಗವಾಗಿ ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ತೆರಳುತ್ತಿರುವ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ತಾಲ್ಲೂಕಿನ ಗಡಿಯಾದ ಕಸ್ಕೇಬೈಲ್‌ನಿಂದ ಚಾರ್ಮಾಡಿ ಘಾಟಿವರೆಗೆ ತೆರೆದಿರುವ ತಿನಿಸುಗಳ ಅಂಗಡಿಗಳು ರಾತ್ರಿಯಿಡೀ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದವು. ಹಗಲು ವೇಳೆ ನೆತ್ತಿ ಸುಡುವ ಬಿಸಿಲು ಇರುವುದರಿಂದ ಹೆಚ್ಚಿನವರು ರಾತ್ರಿ ಪಾದಯಾತ್ರೆ ನಡೆಸುತ್ತಾರೆ.

ನೀರಿನ ಪ್ಲಾಸ್ಟಿಕ್‌ ಬಾಟಲಿಗಳು, ತಿನಿಸುಗಳ ಪ್ಲಾಸ್ಟಿಕ್‌ ಕವರ್‌ಗಳು, ಐಸ್‌ಕ್ರೀಂ ಕಪ್‌ಗಳು ಸೇರಿದಂತೆ ರಸ್ತೆ ಬದಿಯಲ್ಲಿ  ಕಸವನ್ನು ಎಸೆಯಲಾಗಿದೆ.  ಪಾದಯಾತ್ರಿಗಳಿಗೆ ಅನುಕೂಲವಾಗಲು ದಾನಿಗಳು ಚಹಾ, ಕಾಫಿ, ಹಾಲನ್ನು ಉಚಿತವಾಗಿ ವಿತರಿಸುತ್ತಿದ್ದಾರೆ. ಮುಗ್ರಹಳ್ಳಿ ಗ್ರಾಮದಲ್ಲಿರುವ ಅಗ್ನಿಶಾಮಕ ದಳದ ಸಿಬ್ಬಂದಿ ಮಜ್ಜಿಗೆ, ಹಣ್ಣು ವಿತರಿಸಿದರು.

ಪಾದಯಾತ್ರೆಯಲ್ಲಿ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಚಿಕ್ಕಮಗಳೂರು ತಾಲ್ಲೂಕಿನ ಅಲ್ಲಂಪುದ ಗ್ರಾಮದ ಕುಮಾರ್‌ ಎಂಬುವರು ಕೊಟ್ಟಿಗೆಹಾರದಲ್ಲಿ ಕುಸಿದು ಬಿದ್ದರು. ತಕ್ಷಣವೇ ಸಮಾಜ ಸೇವಕ ಆರೀಫ್‌ ಅವರ ಆಂಬುಲೆನ್ಸ್ ಮೂಲಕ ಅವರನ್ನು ಮೂಡಿಗೆರೆಯ ಮಹಾತ್ಮಗಾಂಧಿ ಸ್ಮಾರಕ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು.

ADVERTISEMENT

ಪಾದಯಾತ್ರಿಗಳಿಗಾಗಿ ಆರೀಫ್‌ ಅವರು ಉಚಿತವಾಗಿ ಆಂಬುಲೆನ್ಸ್‌ ಸೇವೆ ಒದಗಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.