ADVERTISEMENT

ಮಾನವೀಯ ಮೌಲ್ಯ ಬೆಳೆಸಿಕೊಳ್ಳಲು ಸಲಹೆ

ಲಯನ್ಸ್ ಕ್ಲಬ್ ವತಿಯಿಂದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಪೀಸ್ ಪೋಸ್ಟರ್ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 4:51 IST
Last Updated 8 ನವೆಂಬರ್ 2025, 4:51 IST
ನರಸಿಂಹರಾಜಪುರ ತಾಲ್ಲೂಕು ಅಳಲಗೆರೆ ಗ್ರಾಮದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಪೀಸ್ ಪೋಸ್ಟರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ನೆನಪಿನ ಕಾಣಿಕೆ ವಿತರಿಸಲಾಯಿತು
ನರಸಿಂಹರಾಜಪುರ ತಾಲ್ಲೂಕು ಅಳಲಗೆರೆ ಗ್ರಾಮದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಪೀಸ್ ಪೋಸ್ಟರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ನೆನಪಿನ ಕಾಣಿಕೆ ವಿತರಿಸಲಾಯಿತು   

ನರಸಿಂಹರಾಜಪುರ: ‘ಭಾರತವು ವಿವಿಧತೆಯಲ್ಲಿ ವೈವಿಧ್ಯತೆ ಹೊಂದಿರುವ ದೇಶವಾಗಿದ್ದು, ಪ್ರತಿಯೊಬ್ಬ ಮಕ್ಕಳೂ ಮಾನವೀಯತೆ ಗುಣ ಬೆಳೆಸಿಕೊಳ್ಳಬೇಕು’ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಪಿ.ಜೆ.ಆ್ಯಂಟೋಣಿ ಹೇಳಿದರು.

ತಾಲ್ಲೂಕಿನ ಅಳಲಗೆರೆ ಗ್ರಾಮದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಮಂಗಳವಾರ 5 ಹಾಗೂ 6ನೇ ತರಗತಿಯ ಮಕ್ಕಳಿಗಾಗಿ ನಡೆಸಿದ ಪೀಸ್ ಪೋಸ್ಟರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಕ್ಕಳು ಸರ್ವತೋಮುಖವಾಗಿ ಬೆಳವಣಿಗೆ ಹೊಂದಬೇಕಾದರೆ ಆರೋಗ್ಯವಂತರಾಗಿರಬೇಕು. ಮಕ್ಕಳಿಗೆ ಪೌಷ್ಟಿಕಾಂಶದ ಆಹಾರ ನೀಡಬೇಕು. ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗಿರದೆ ಎಲ್ಲರೊಂದಿಗೆ ಹೊಂದಿಕೊಂಡು ಸಾಮರಸ್ಯದಿಂದ ಬಾಳಬೇಕು. ಯಾರೂ ಮಕ್ಕಳ ಭಾವನೆಯನ್ನು ಕೆರಳಿಸುವ ಕೆಲಸ ಮಾಡಬಾರದು. ಮಕ್ಕಳ ಮನಸ್ಸಿನಲ್ಲಿ ಹೊಳೆಯುವ ಸಾಮರಸ್ಯದ ಕಲ್ಪನೆಯು ಚಿತ್ರವಾಗಿ ಹೊರಬರಬೇಕು ಎಂದರು.

ADVERTISEMENT

ಲಯನ್ಸ್ ಕ್ಲಬ್ ರೀಸನ್ 15ರ ರೀಜನಲ್ ಛೇರ್ಮನ್ ಸಿಜು ಮಾತನಾಡಿ, ಲಯನ್ಸ್ ಕ್ಲಬ್ ಇಂದು 200 ದೇಶಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಮಕ್ಕಳ ಪ್ರತಿಭೆ ಹೊರ ತರಬೇಕು ಎಂಬ ಉದ್ದೇಶದಿಂದ ಪ್ರತಿವರ್ಷ ಒಂದು ವಿಷಯದ ಥೀಮ್ ನೀಡಲಾಗುತ್ತದೆ. ಈ ವರ್ಷ ನಾವೆಲ್ಲರೂ ಒಗ್ಗೂಡಿ ಬಾಳೋಣ ಎಂಬ ವಿಷಯ ನೀಡಲಾಗಿದೆ. ಈ ವಿಷಯ ಇಟ್ಟುಕೊಂಡು ಮಕ್ಕಳು ಚಿತ್ರ ಬರೆಯಬೇಕಾಗಿದೆ. ಆಯಾ ದೇಶದ ಲಯನ್ಸ್ ಕ್ಲಬ್‌ಗಳು ಸ್ಥಳೀಯ ಶಾಲೆಗಳ 5, 6, 7ನೇ ತರಗತಿಯ ಮಕ್ಕಳಿಗೆ ಚಿತ್ರ ಕಲೆ ಸ್ಪರ್ಧೆ ನಡೆಸುತ್ತದೆ. ನಮ್ಮ ದೇಶ, ನಮ್ಮ ರಾಜ್ಯ, ನಾವೆಲ್ಲರೂ ಒಂದು ಎಂಬುದು ಪೀಸ್ ಪೋಸ್ಟರ್ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.

ಲಯನ್ಸ್ ಕ್ಲಬ್‌ನ ರೀಜನ್- 15ರ ಪ್ರಾಂತೀಯ ರಾಯಭಾರಿ ಎಂ.ಪಿ.ಸನ್ನಿ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಕೆ.ಟಿ.ಎಲ್ದೊ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಭಾರಿ ಪ್ರಾಂಶುಪಾಲ ವಿಶ್ವನಾಥ್, ಡ್ರಾಯಿಂಗ್ ಟೀಚರ್ ಜ್ಯೋತಿ ಇದ್ದರು. ಸಹ ಶಿಕ್ಷಕಿ ಸುಹಾಸಿನಿ, ಭಾನು ಇದ್ದರು.