ADVERTISEMENT

ಚಿಕ್ಕಮಗಳೂರು: ಪೋಕ್ಸೊ ಪ್ರಕರಣ- ನಾಲ್ವರಿಗೆ 10 ವರ್ಷ ಸಜೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 6:57 IST
Last Updated 31 ಜುಲೈ 2025, 6:57 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಚಿಕ್ಕಮಗಳೂರು: ಪೋಕ್ಸೊ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಗೆ 10 ವರ್ಷ ಸಜೆ ಹಾಗೂ ದಂಡ ವಿಧಿಸಿ   ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಆದೇಶ ನೀಡಿದೆ.

ADVERTISEMENT

ನಗರದ ರಾಮನಹಳ್ಳಿಯ ಫರ್ಜಾನ್, ಆದರ್ಶನಗರದ ಪ್ರಶಾಂತ್, ಹಾಸನದ ಲಕ್ಷ್ಮಿ ದಿನೇಶ್ ಹಾಗೂ ದಿನೇಶ್ ಆರೋಪಿಗಳು.

ಫರ್ಜಾನ್ ಮತ್ತು ಪ್ರಶಾಂತ್ ಅವರಿಗೆ 10 ವರ್ಷ ಸಜೆ ಮತ್ತು ತಲಾ ₹32 ಸಾವಿರ, ಲಕ್ಷ್ಮಿ ಮತ್ತು ದಿನೇಶ್‌ಗೆ 10 ವರ್ಷ ಸಜೆ ಮತ್ತು ₹35 ಸಾವಿರ ದಂಡ ವಿಧಿಸಲಾಗಿದೆ. ದೌರ್ಜನ್ಯಕ್ಕೆ ಒಳಗಾದ ಬಾಲಕಿಗೆ ₹1 ಲಕ್ಷ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಸೂಚನೆ ನೀಡಿದೆ.

2023ರಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ನಡೆಸಿದ್ದ ಡಿವೈಎಸ್ಪಿ ಎಚ್.ಎಂ. ಶೈಲೇಂದ್ರ ಅವರು ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಅಭಿಯೋಜಕ ಎಚ್.ಎಸ್.ಲೋಹಿತಾಶ್ವಚಾರ್ ಮತ್ತು ಬಿ.ಭರತ್ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.