ADVERTISEMENT

ತಿಂಗಳ ಸಂಬಳ ನೀಡಿದ ಪೊಲೀಸರು

ತಲಸ್ಸೇಮಿಯಾದಿಂದ ಬಳಲುತ್ತಿರುವ ಋತ್ವಿಕ್‌

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2022, 7:38 IST
Last Updated 7 ಆಗಸ್ಟ್ 2022, 7:38 IST
ಋತ್ವಿಕ್ ಚಿಕಿತ್ಸೆಗಾಗಿ ಬಾಳೂರು ಪೊಲೀಸರು ಒಂದು ತಿಂಗಳ ವೇತನವನ್ನು ನೀಡಿದರು. ಪಿಎಸ್‍ಐ ಪವನ್ ಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು
ಋತ್ವಿಕ್ ಚಿಕಿತ್ಸೆಗಾಗಿ ಬಾಳೂರು ಪೊಲೀಸರು ಒಂದು ತಿಂಗಳ ವೇತನವನ್ನು ನೀಡಿದರು. ಪಿಎಸ್‍ಐ ಪವನ್ ಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು   

ಕೊಟ್ಟಿಗೆಹಾರ: ತಲಸ್ಸೇಮಿಯಾ ಸಮಸ್ಯೆಯಿಂದ ಬಳಲುತ್ತಿರುವ ಬೀರ್ಗೂರು ಗ್ರಾಮದ ದಿವಾಕರ್ ಹಾಗೂ ಶಾಲಿನಿ ದಂಪತಿ ಪುತ್ರ ಋತ್ವಿಕ್ ಚಿಕಿತ್ಸೆಗಾಗಿ ಬಾಳೂರು ಠಾಣೆಯ ಪೊಲೀಸರು ಒಂದು ತಿಂಗಳ ಸಂಬಳವನ್ನು ನೀಡಿದ್ದು, ಮಾನವೀಯತೆ ಮೆರೆದಿದ್ದಾರೆ.

ಬಾಳೂರು ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಸಿ.ಸಿ.ಪವನ್ ಕುಮಾರ್ ಮಾತನಾಡಿ ‘ಬಾಲಕ ಋತ್ವಿಕ್ ತಲಸ್ಸೇಮಿಯಾ ಎಂಬ ಅಪರೂಪದ ಸಮಸ್ಯೆಯಿಂದ ಬಳಲುತ್ತಿದ್ದಾನೆ. ನೆರವು ನೀಡುವುದರಿಂದ ಪ್ರಾಣ ರಕ್ಷಿಸಲು ಸಾಧ್ಯ. ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಅಗತ್ಯವಿದೆ. ನಮ್ಮಿಂದಾದ ಅಳಿಲು ಸೇವೆ ಮಾಡಿದ್ದೇವೆ’ ಎಂದರು. ಆರ್ಥಿಕ ನೆರವನ್ನು ಠಾಣಾಧಿಕಾರಿ ಸಿ.ಸಿ. ಪವನ್ ಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿ ದಿವಾಕರ್‌ ಅವರಿಗೆ ಹಸ್ತಾಂತರಿಸಿದರು.

ಪೊಲೀಸ್ ಸಿಬ್ಬಂದಿ ಅಭಿ ಬಿದರಹಳ್ಳಿ, ಸತೀಶ್, ಶ್ರೀಧರ್, ಮಹೇಶ್, ಹೇಮಂತ್, ಪ್ರದೀಪ್, ಜಾಫರ್, ಮುಖಂಡರಾದ ಪರೀಕ್ಷಿತ್ ಜಾವಳಿ, ಶಶಿಕುಮಾರ್, ಕೃಷ್ಣ ಟೇಲರ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.