ADVERTISEMENT

ತಿಂಗಳಾಂತ್ಯಕ್ಕೆ ಒನ್‌ ಹೆಲ್ಪ್‌ಲೈನ್‌–112

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಕ್ಷಯ್‌ ಎಂ.ಹಾಕೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2021, 2:54 IST
Last Updated 12 ಫೆಬ್ರುವರಿ 2021, 2:54 IST
ಅಕ್ಷಯ್‌
ಅಕ್ಷಯ್‌   

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಫೆಬ್ರುವರಿ ಅಂತ್ಯದೊತ್ತಿಗೆ ಒನ್‌ ಹೆಲ್ಪ್‌ಲೈನ್‌ ‘112’ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಕ್ಷಯ್‌ ಎಂ.ಹಾಕೆ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಜಿಲ್ಲೆಗಳಲ್ಲೂ ಈ ವ್ಯವಸ್ಥೆ ಜಾರಿಯಾಗಲಿದೆ. ‘ಒನ್‌ ನೇಷನ್‌– ಒನ್‌ ಹೆಲ್ಪ್‌ಲೈನ್‌’ ಪರಿಕಲ್ಪನೆ ಇದಾಗಿದೆ. ತುರ್ತು ಸಂದರ್ಭದಲ್ಲಿ 112 ಸಂಖ್ಯೆಗೆ ಕರೆ ಮಾಡಿ ಅಗ್ನಿಶಾಮಕ, ಪೊಲೀಸ್‌ ಸಹಿತ ವಿವಿಧ ವಿಭಾಗಗಳನ್ನು ಸಂಪರ್ಕಿಸುವ ವ್ಯವಸ್ಥೆ ಇದಾಗಿದೆ ಎಂದು ಹೇಳಿದರು.

ಈ ಸೌಕರ್ಯ ಜಾರಿಗೊಳಿಸುತ್ತಿರುವ ಬಗ್ಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ. ಜನರ ಬಳಿಗೆ ತೆರಳಿ ತುರ್ತು ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಈ ವ್ಯವಸ್ಥೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

ADVERTISEMENT

‘ಒನ್‌ ಹೆಲ್ಪ್‌ಲೈನ್‌’ಗೆ ಸಂಬಂಧಿಸಿ ದಂತೆ 250ಕ್ಕೂ ಹೆಚ್ಚು ಸಿಬ್ಬಂದಿ, ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ಯಾವ ರೀತಿ ಕಾರ್ಯನಿರ್ವಹಿಸಬೇಕು ಎಂಬ ಬಗ್ಗೆ ತಿಳಿಸಲಾಗಿದೆ’ ಎಂದರು.

ಕಲ್ಲು ಕ್ವಾರಿಗಳು, ಕ್ರಷರ್‌ ಮಾಲೀ ಕರ ಸಭೆ ನಡೆಸಲಾಗಿದೆ. ಕ್ರಷರ್‌, ಕ್ವಾರಿಗಳ ಬಗ್ಗೆ ನಿಗಾ ವಹಿಸಲಾಗಿದೆ. ವಿವರ ಪರಿಶೀಲಿಸಲಾಗಿದೆ ಎಂದರು.

‘ಜಿಲ್ಲಾ ಪೊಲೀಸ್‌ ಕಚೇರಿ ಮುಂಭಾಗದ ವೃತ್ತಕ್ಕೆ ಐಪಿಎಸ್‌ ಅಧಿಕಾರಿ ದಿ.ಮಧುಕರ ಶೆಟ್ಟಿ ಅವರ ಹೆಸರಿಡುವಂತೆ ಹಲವು ಮನವಿ ಸಲ್ಲಿಕೆಯಾಗಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.