ರವಿ ಶ್ಯಾನುಭೋಗ್
ತರೀಕೆರೆ: ನೊಳಂಬ ಲಿಂಗಾಯಿತ ಸಮಾಜದ ವತಿಯಿಂದ ಅಜ್ಜಂಪುರದ ಶ್ರೀ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಇತ್ತೀಚೆಗೆ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾಜಿ ಶಾಸಕ ಎಸ್.ಎಂ.ನಾಗರಾಜ್ ಅವರನ್ನು ಓಲೈಕೆ ಮಾಡಲು ಮಾಜಿ ಶಾಸಕ ಡಿ.ಎಸ್.ಸುರೇಶ್ ಮುಂದಾದದ್ದು ಸರಿಯಲ್ಲ ಎಂದು ನೊಳಂಬ ಲಿಂಗಾಯಿತ ಸಮಾಜದ ಮುಖಂಡ ರವಿ ಶ್ಯಾನುಭೋಗ್ ಹೇಳಿದರು.
ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಆಯೋಜನೆ ವಿಚಾರವಾಗಿ ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬುದು ನಮ್ಮ ವಾದವಾಗಿತ್ತು. ಅದಕ್ಕಾಗಿ ನಾವು ವಿರೋಧ ವ್ಯಕ್ತಪಡಿಸಿದ್ದೆವು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಶಾಸಕ ಡಿ.ಎಸ್.ಸುರೇಶ್ ಅವರು‘ಯಾರೋ ಕೆಲವರು ವಿರೋಧಿಸಿದ ಮಾತ್ರಕ್ಕೆ ಎಸ್.ಎಂ.ನಾಗರಾಜ್ ಅವರು ಹೆದರಬೇಕಿಲ್ಲ. ನಿಮ್ಮ ಬೆಂಬಲಕ್ಕೆ ನಾವಿದ್ದೇವೆ’ ಎಂಬ ಮಾತುಗಳನ್ನು ಆಡಿದ್ದಾರೆ. ನಮ್ಮ ಸಮಾಜದ ವಿಷಯದಲ್ಲಿ ಮೂಗು ತೂರಿಸಲು ಡಿ.ಎಸ್.ಸುರೇಶ್ ಅವರಿಗೆ ನೈತಿಕತೆಯಿಲ್ಲ. ನಮ್ಮ ಸಮಾಜದ ಸಮಸ್ಯೆಯನ್ನು ನಾವೇ ಬಗೆಹರಿಸಿಕೊಳ್ಳುವ ಬೌದ್ದಿಕ ಹಂತದಲ್ಲಿ ನಮ್ಮ ಸಮಾಜವಿದೆ’ ಎಂದು ಅವರು ತಿರುಗೇಟು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.