ADVERTISEMENT

ನರಸಿಂಹರಾಜಪುರ: ಮನೆಗಳಲ್ಲೇ ಪೌಷ್ಟಿಕ ಆಹಾರ ತಯಾರಿಸಿ

ದಿಂಡಿನಕೊಪ್ಪ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 5:08 IST
Last Updated 9 ಅಕ್ಟೋಬರ್ 2025, 5:08 IST
ನರಸಿಂಹರಾಜಪುರ ತಾಲ್ಲೂಕು ದಿಂಡಿನ ಕೊಪ್ಪ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ಪೋಷಣ್ ಅಭಿಯಾನ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು
ನರಸಿಂಹರಾಜಪುರ ತಾಲ್ಲೂಕು ದಿಂಡಿನ ಕೊಪ್ಪ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ಪೋಷಣ್ ಅಭಿಯಾನ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು   

ದಿಂಡಿನಕೊಪ್ಪ (ನರಸಿಂಹರಾಜಪುರ): ಪೌಷ್ಟಿಕ ಆಹಾರ ಸೇವನೆಯಿಂದ ರೋಗ ಮುಕ್ತವಾಗಿ ಬದುಕಬಹುದು. ನಮ್ಮ ಮನೆಗಳಲ್ಲೇ ಪೌಷ್ಟಿಕ ಆಹಾರ ತಯಾರಿಸಬೇಕು ಎಂದು ನಾಗಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೀನಾ ಬೆನ್ನಿ ಹೇಳಿದರು.

ತಾಲ್ಲೂಕಿನ ನಾಗಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿಂಡಿನಕೊಪ್ಪ ಅಂಗನವಾಡಿ ಕೇಂದ್ರದಲ್ಲಿ ನಡೆದ ರಾಷ್ಟ್ರೀಯ ಪೋಷಣ್ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಪೌಷ್ಟಿಕತೆ ಮುಕ್ತ ಭಾರತ ನಿರ್ಮಾಣ ನಮ್ಮಿಂದ, ನಮ್ಮ ಮನೆಗಳಿಂದಲೇ ಪ್ರಾರಂಭಿಸೋಣ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲಾ ಯೋಜನೆಗಳನ್ನು ಬಳಸಿಕೊಂಡು ನಮ್ಮ ಕುಟುಂಬವನ್ನು ಸದೃಢ ಕುಟುಂಭವನ್ನಾಗಿ ಮಾಡಬೇಕು ಎಂದರು.

ADVERTISEMENT

ಸಿಡಿಪಿಒ ಇಲಾಖೆಯ ಮೇಲ್ವಿಚಾರಕಿ ಸಾವಿತ್ರಮ್ಮ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ನಾವು ಸೇವಿಸುವ ಆಹಾರ ಮತ್ತು ಆರೋಗ್ಯ ಮನುಷ್ಯನ ಜೀವನದ ಅಮೂಲ್ಯವಾದ ವಿಚಾರವಾಗಿದೆ. ಇತ್ತೀಚಿನ ದಿನಗಳಲ್ಲಿ ಜನರು ಜಂಗ್‌ಪುಡ್ ಸೇವಿಸಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ನಮ್ಮ ಇಲಾಖೆಯಿಂದ ಗರ್ಭಿಣಿಯರು, ಬಾಣಂತಿಯರಿಗೆ ಪೌಷ್ಟಿಕ ಆಹಾರ ನೀಡುವ ಯೋಜನೆ ಹಮ್ಮಿಕೊಳ್ಳುತ್ತಿದ್ದೇವೆ ಎಂದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ ಮಾತನಾಡಿ, ಸರ್ಕಾರವು ಅಂಗನವಾಡಿ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಿ ಸರ್ಕಾರಿ ನೌಕರರಂತೆ ಸಂಬಳ ನೀಡಬೇಕು. ಪಟ್ಟಣದ ವ್ಯಾಪ್ತಿಯ ಎಲ್ಲಾ ಅಂಗನವಾಡಿಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.

ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿ ನಮಿತ ಅವರು, ಗರ್ಭಿಣಿ, ಬಾಣಂತಿಯರು ಅನುಸರಿಸಬೇಕಾದ ಎಚ್ಚರಿಕೆ ಬಗ್ಗೆ ಮಾಹಿತಿ ನೀಡಿದರು. ಹಿರಿಯ ಆರೋಗ್ಯ ನಿರೀಕ್ಷಿಣಾಧಿಕಾರಿ ದರ್ಶನ್ ಪೌಷ್ಟಿಕ ಆಹಾರ ಸೇವನೆಯ ಬಗ್ಗೆ ಸ್ಟೈಡ್‌ ಶೋ ಪ್ರದರ್ಶನದೊಂದಿಗೆ ಮಾಹಿತಿ ನೀಡಿದರು.

ನಾಗಲಾಪುರ ಗ್ರಾಮ ಪಂಚಾಯಿತಿ ಪಿ.ಡಿ.ಒ. ಪ್ರೇಂಕುಮಾರ್, ಗ್ರಾಮದ ಹಿರಿಯರಾದ ನಾಗಭೂಷಣ್, ಗ್ರಾಮ ಪಂಚಾಯಿತಿ ಸದಸ್ಯರಾದ ಚಿನ್ನಯ್ಯ, ರಮೇಶ್, ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಪವಿತ್ರ, ನಿವೃತ್ತ ಶಿಕ್ಷಕ ರಾಜಕುಮಾರ್ ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮಿದೇವಿ, ಪಟ್ಟಣದ ವಿವಿಧ ಅಂಗನವಾಡಿಯ ಕಾರ್ಯಕರ್ತೆಯರಾದ ಮಂಜುಳಾ, ಪ್ರತಿಮಾ, ಗೀತಾ, ಶೃತಿ, ಹೇಮಾವತಿ, ಶೈಲಾ, ಕವಿತ, ದಿವ್ಯ, ಮಧುಮಾಲ, ಶಿವರತ್ನ, ರಮ, ಅನಿತ, ಉಷಾ, ಸೌಮ್ಯ, ಶಾಂತ, ಪೂರ್ಣಿಮ, ಆಶಾ ಕಾರ್ಯಕರ್ತೆ ವೀಣಾ, ಅಂಗನವಾಡಿ ಸಹಾಯಕಿ ರಾಧಾ ಭಾಗವಹಿಸಿದ್ದರು.

ಪೌಷ್ಟಿಕ ಆಹಾರದ ಪ್ರದರ್ಶನ ಏರ್ಪಡಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.