ADVERTISEMENT

ಆಲ್ದೂರು | ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಗುಂಡಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2022, 5:16 IST
Last Updated 16 ಡಿಸೆಂಬರ್ 2022, 5:16 IST
ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಸತ್ತಿಹಳ್ಳಿ ಪಂಚಾಯಿತಿ ಬಳಿ ಬಿದ್ದಿರುವ ಗುಂಡಿ
ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಸತ್ತಿಹಳ್ಳಿ ಪಂಚಾಯಿತಿ ಬಳಿ ಬಿದ್ದಿರುವ ಗುಂಡಿ   

ಆಲ್ದೂರು: ಸಮೀಪದ ಸತ್ತಿಹಳ್ಳಿ ಗ್ರಾಮದ ಬಳಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಅಪಾಯಕಾರಿ ಗುಂಡಿ ಬಿದ್ದಿದ್ದು, ವಾಹನ ಸಂಚಾರ ದುಸ್ತರವಾಗಿದೆ.

ಸತ್ತಿಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯ ಸ್ವಲ್ಪ ಅಂತರದಲ್ಲಿ ರಸ್ತೆಯ ಮಧ್ಯದಲ್ಲಿ ದೊಡ್ಡ ಗುಂಡಿ ಬಿದ್ದಿದೆ. ಈ ಹೆದ್ದಾರಿಯು ಆಲ್ದೂರು, ಮೂಡಿಗೆರೆ, ಕೊಟ್ಟಿಗೆಹಾರ ಮೂಲಕ ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುತ್ತದೆ. ಮಳೆಗೆ ಗುಂಡಿಯಲ್ಲಿ ನೀರು ಸಂಗ್ರಹವಾಗಿ ಅವಘಡಕ್ಕೆ ದಾರಿ ಮಾಡುತ್ತಿದೆ. ಕೇವಲ 100 ಮೀಟರ್ ಅಂತರದಲ್ಲಿ ಜೆವಿಎಸ್ ಶಾಲೆ ಇದೆ. ಗುಂಡಿಯನ್ನು ಶೀಘ್ರವೇ ಮುಚ್ಚಬೇಕು ಎಂದು ಸ್ಥಳೀಯ ರಫೀಕ್, ವೆಂಕಟೇಶ್ ಕೆ, ವೇಲು, ಅದ್ರಾಮ, ಅಬ್ಬಾಸ್ ಒತ್ತಾಯಿಸಿದ್ದಾರೆ.

‘ರಾಷ್ಟ್ರೀಯ ಹೆದ್ದಾರಿಯಾದರೂ ಪಂಚಾಯಿತಿ ವತಿಯಿಂದ ಈಚೆಗೆ ಜಲ್ಲಿ ಕಲ್ಲಿನ ಪುಡಿಯನ್ನು ಹಾಕಿ ಗುಂಡಿ ಮುಚ್ಚಿಸಲಾಗಿತ್ತು ಮತ್ತೆ ಗುಂಡಿ ದೊಡ್ಡದಾಗಿದ್ದು, ಸಂಬಂಧ ಪಟ್ಟ ಇಲಾಖೆಗೆ ಪತ್ರ ಬರೆಯಲಾಗುವುದು’ ಎಂದು ಪಿಡಿಒ ಪರಶುರಾಮ್ ಪ್ರತಿಕ್ರಿಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.