ಕೊಟ್ಟಿಗೆಹಾರ: ಪೆಟ್ರೋಲ್ ಬಂಕ್‌ನಲ್ಲಿ ವಾಹನಕ್ಕೆ ಪೆಟ್ರೋಲ್ ಹಾಕಿಸಿ, ನಂತರ ಅಲ್ಲಿಯೇ ಬಿಟ್ಟು ಹೋದ ಹಣದ ಪರ್ಸ್ ಅನ್ನು ಪೆಟ್ರೋಲ್ ಬಂಕ್ ಸಿಬ್ಬಂದಿ ವಾರಸುದಾರರಿಗೆ ತಲುಪಿಸಿದ್ದಾರೆ.
ಬಣಕಲ್‌ನ ಗುಜರಿ ವ್ಯಾಪಾರಿ ಅಬ್ದುಲ್ ರೆಹಮಾನ್ ಬುಧವಾರ ತಮ್ಮ ಗೂಡ್ಸ್ ವಾಹನಕ್ಕೆ ಪೆಟ್ರೋಲ್ ಹಾಕಿಸಿ ಪರ್ಸ್ ಅನ್ನು ಅಲ್ಲಿಯೇ ಬಿಟ್ಟು ಹೋಗಿದ್ದರು. ಪರ್ಸ್‌ನಲ್ಲಿ ₹10ಸಾವಿರ ಹಣವಿತ್ತು. ಅದನ್ನು ನೋಡಿದ ಪೆಟ್ರೋಲ್ ಬಂಕ್ ಸಿಬ್ಬಂದಿ ಪ್ರಕಾಶ್ ಪೂಜಾರಿ, ಹಣದ ಪರ್ಸ್ ಅನ್ನು ಅಬ್ದುಲ್ ರೆಹಮಾನ್ ಅವರಿಗೆ ಹಿಂದಿರುಗಿಸಿ ಮಾನವೀಯತೆ ಮೆರೆದಿದ್ದಾರೆ. ಈ ಸಂದರ್ಭದಲ್ಲಿ ಶರತ್, ಸುದೀಪ್, ಶಶಾಂಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.