
ಪ್ರಜಾವಾಣಿ ವಾರ್ತೆ
ಆಲ್ದೂರು: ಪಟ್ಟಣದಲ್ಲಿ ಮಂಗಳವಾರ ಅರ್ಧ ಗಂಟೆಗೂ ಹೆಚ್ಚು ಕಾಲ ಗುಡುಗು, ಮಿಂಚಿನೊಂದಿಗೆ ಉತ್ತಮ ಮಳೆಯಾಗಿದೆ.
ಹಳಿಯೂರಿನಲ್ಲಿ 2 ಇಂಚು ಬನ್ನೂರು, ತೋರಣ ಮಾವು ಗ್ರಾಮದಲ್ಲಿ 1 ಇಂಚು, ಸುತ್ತಲಿನ ಗ್ರಾಮಗಳಾದ ಕಸಿಗೆ, ಕಾರೆಮನೆ, ಕೆಸವಿನ ಹಕ್ಲು, ಸತ್ತಿಹಳ್ಳಿ ,ಯಲಗುಡಿಗೆ, ಗುಲ್ಲನ್ ಪೇಟೆ, ಬೈಗೂರು ಮುಂತಾದ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಬಿರು ಬಿಸಿಲಿನಿಂದ ಕಂಗಾಲಾಗಿದ್ದ ಜನರು, ಬೆಳೆಗಾರರು ಮಳೆಯಿಂದ ಸಂತಸಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.