ಬೀರೂರು: ‘ಪತ್ರಕರ್ತರು ಗುಂಪುಗಾರಿಕೆ ತೊರೆದು ಕೆಲಸ ಮಾಡಿದರೆ ಸಾಮಾಜಿಕವಾಗಿ ಗೌರವ ಲಭಿಸುತ್ತದೆ’ ಎಂದು ಚಿಕ್ಕಮಗಳೂರು ಜಿಲ್ಲಾ ಕಾರ್ಯನಿರತ ಪರ್ತಕರ್ತರ ಸಂಘದ ಅಧ್ಯಕ್ಷ ಸಿ.ಎಚ್.ಮೂರ್ತಿ ಅಭಿಪ್ರಾಯಪಟ್ಟರು.
ಕಡೂರಿನ ಪ್ರವಾಸಿ ಮಂದಿರದಲ್ಲಿ ಭಾನುವಾರ ತಾಲ್ಲೂಕು ಮತ್ತು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಕಡೂರು ತಾಲ್ಲೂಕು ಸಂಘದ ಅಧ್ಯಕ್ಷ ಟಿ.ಜಿ.ಲೋಕೇಶಪ್ಪ ಮಾತನಾಡಿ, ‘ ಪತ್ರಕರ್ತರ ಗುರುತಿನ ಚೀಟಿ ಪಡೆಯಲು ಮಾತ್ರ ಸಂಘಕ್ಕೆ ಸೇರುವವರಿಗೆ ಮುಂದಿನ ದಿನಗಳಲ್ಲಿ ಗುರುತಿನ ಚೀಟಿ ನೀಡಲಾಗುವುದಿಲ್ಲ. ಸಂಘದ ಪದಾಧಿಕಾರಿಗಳು ಎಲ್ಲ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಾರ್ಯನಿರತರಾಗಿ ಒಗ್ಗಟ್ಟನ್ನು ತೋರಬೇಕು’ ಎಂದರು.
ಪತ್ರಕರ್ತರ ಗುರುತಿನ ಚೀಟಿಯನ್ನು ತಾಲ್ಲೂಕು ಸಂಘದ ಗೌರವ ಅಧ್ಯಕ್ಷ ಕೆ.ವಿ.ವಾಸು ವಿತರಿಸಿದರು. ಪತ್ರಕರ್ತ ಎಚ್.ಮುರುಗೇಶಪ್ಪ, ಟಿ.ಪ್ರಕಾಶ್, ಪಿ.ಸಿ.ಲೋಕೇಶ್, ಎಂ.ಎಸ್.ರಾಜು, ಲೋಕೇಶಪ್ಪ, ರಮೇಶ್, ರಾಜು.ಎಂ, ಗಿರೀಶ್.ಜಿ, ಬಿ.ಎನ್.ಆನಂದ್, ಚೇತನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.