ADVERTISEMENT

ಪೌರ ಕಾರ್ಮಿಕರ ಸಂಘ: ಅಣ್ಣಪ್ಪ ನೂತನ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 6:11 IST
Last Updated 18 ಡಿಸೆಂಬರ್ 2025, 6:11 IST
ಅಜ್ಜಂಪುರ ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ಪಂಚಾಯಿತಿ ಅಧ್ಯಕ್ಷ ಎ.ಜಿ.ರೇವಣ್ಣ ಅವರು ತಾಲ್ಲೂಕು ಪೌರ ಕಾರ್ಮಿಕರ ಸಂಘದ ನಾಮಫಲಕ ಅನಾವರಣಗೊಳಿಸಿದರು 
ಅಜ್ಜಂಪುರ ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ಪಂಚಾಯಿತಿ ಅಧ್ಯಕ್ಷ ಎ.ಜಿ.ರೇವಣ್ಣ ಅವರು ತಾಲ್ಲೂಕು ಪೌರ ಕಾರ್ಮಿಕರ ಸಂಘದ ನಾಮಫಲಕ ಅನಾವರಣಗೊಳಿಸಿದರು    

ಅಜ್ಜಂಪುರ: ಪಟ್ಟಣ ಪಂಚಾಯಿತಿಯಲ್ಲಿ ತಾಲ್ಲೂಕು ಪೌರ ಕಾರ್ಮಿಕರ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಸಂಘದ ನೂತನ ಅಧ್ಯಕ್ಷರಾಗಿ ಅಣ್ಣಪ್ಪ, ಉಪಾಧ್ಯಕ್ಷರಾಗಿ ವೆಂಕಟೇಶ ಮೂರ್ತಿ ಅವಿರೋಧ ಆಯ್ಕೆಯಾದರು.

ಕಾರ್ಯದರ್ಶಿಯಾಗಿ ಮಹೇಶ್‌, ಪ್ರಧಾನ ಕಾರ್ಯದರ್ಶಿಯಾಗಿ ಕೆ.ತಿಪ್ಪೇಶ್‌, ಖಜಾಂಜಿಯಾಗಿ ಬಸವರಾಜು, ಗೌರವಾಧ್ಯಕ್ಷೆಯಾಗಿ ರತ್ನಮ್ಮ, ಸಂಚಾಲಕರಾಗಿ ರಂಗಸ್ವಾಮಿ, ಕುಮಾರ್‌, ಸದಸ್ಯರಾಗಿ ಶಾರದಮ್ಮ, ಭಾಗ್ಯಲಕ್ಷ್ಮಿ, ಶಾಂತಮ್ಮ, ಗಿರೀಶ್‌, ಜಯಪ್ಪ, ಎಚ್.ತಿಪ್ಪೇಶ್‌, ಸುರೇಶ್‌, ವಿಜಯ ಕುಮಾರ್‌, ಮಂಜುನಾಥ್‌ ಆಯ್ಕೆಯಾದರು.‌

ಇದೇ ವೇಳೆ ಮಾತನಾಡಿದ ಪಂಚಾಯಿತಿ ಅಧ್ಯಕ್ಷ ಎ.ಜಿ.ರೇವಣ್ಣ, ಪೌರ ನೌಕರರು, ಪಟ್ಟಣದ ಸ್ವಚ್ಛತೆ ಕಾಪಾಡುವ ಜತೆಗೆ ತಮ್ಮ ವೈಯಕ್ತಿಕ ಆರೋಗ್ಯದ ಕಡೆಗೂ ಗಮನ ಕೊಡಬೇಕು. ಪಂಚಾಯಿತಿ ವತಿಯಿಂದ ನೀಡಲಾಗುವ ಸುರಕ್ಷತಾ ಪರಿಕರಗಳನ್ನು ಬಳಸಬೇಕು ಎಂದು ಸಲಹೆ ನೀಡಿದರು.

ADVERTISEMENT

ಪಂಚಾಯಿತಿ ಉಪಾಧ್ಯಕ್ಷೆ ಕವಿತಾ ಕೇಶವ ಮೂರ್ತಿ, ಸದಸ್ಯೆ ಸುಮಲತಾ ಮಲ್ಲಿಕಾರ್ಜುನ್‌, ಬಿಂದು ಯತೀಶ್‌, ಗಿರೀಶ್‌, ತಿಪ್ಪೇಶ್‌ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.