ಚಿಕ್ಕಮಗಳೂರು: ಯುಪಿಎಸ್‌ಸಿ (ಕೇಂದ್ರ ಲೋಕಸೇವಾ ಆಯೋಗ) ಪರೀಕ್ಷೆ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಕಡೂರು ತಾಲ್ಲೂಕು ಬೀರೂರಿನ ಎಚ್.ಸಂತೋಷ್ ಅವರು 751ನೇ ರ‍್ಯಾಂಕ್ ಪಡೆದು ಸಾಧನೆ ಮೆರೆದಿದ್ದಾರೆ.
ಸಂತೋಷ್ ಅವರು ವೀಳ್ಯದೆಲೆ ವ್ಯಾಪಾರಿ ಎಂ. ಹನುಮಂತಪ್ಪ ಮತ್ತು ಟಿ. ಗೀತಾ ದಂಪತಿ ಪುತ್ರ . ಕಳೆದ ಬಾರಿ 753ನೇ ರ‍್ಯಾಂಕ್ ಪಡೆದಿದ್ದರು.
ಸಂತೋಷ ಅವರು ಅಜ್ಜಂಪುರ ತಾಲ್ಲೂಕಿನ ಮುದಿಗೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ್ದಾರೆ. ಅಜ್ಜಂಪುರದ ಶೆಟ್ರುಸಿದ್ದಪ್ಪ ಸರ್ಕಾರಿ ವಿದ್ಯಾಲಯದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ ಮಾಡಿದ್ದಾರೆ. ಚಿಕ್ಕಮಗಳೂರಿನ ಡಿಎಸಿಜಿ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ 2010ರಲ್ಲಿ ಡಿಪ್ಲೊಮಾ (ಮೆಕ್ಯಾನಿಕಲ್) ವ್ಯಾಸಂಗ ಪೂರೈಸಿದ್ದಾರೆ.
ಬೆಂಗಳೂರ ವಿಶ್ವವಿದ್ಯಾಲಯದಿಂದ ದೂರ ಶಿಕ್ಷಣದಲ್ಲಿ 2017ರಲ್ಲಿ ಬಿ.ಎ (ಇತಿಹಾಸ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ) ಪದವಿ ಪಡೆದಿದ್ದಾರೆ. ಎಸ್‌ಬಿಎಂನಲ್ಲಿ (ಸ್ಟೇಟ್ ಬ್ಯಾಂಕ್ ಆಫ್ ಮೈಸೂರು) ಕರ್ಕ್ ಆಗಿ 2011ರ ಡಿಸೆಂಬರ್‌ನಲ್ಲಿ ನೇಮಕವಾಗಿ, ಮೈಸೂರಿನಲ್ಲಿ ಕಾರ್ಯನಿರ್ವಹಿಸಿದ್ದಾರೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ತಾಂತ್ರಿಕ ಹುದ್ದೆಗೆ 2014ರ ಅಕ್ಟೋಬರ್‌ನಲ್ಲಿ ನೇಮಕವಾಗಿದ್ದರು, ನಂತರ ಹಿರಿಯ ತಾಂತ್ರಿಕ ಸಹಾಯಕರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.