ADVERTISEMENT

ಶೃಂಗೇರಿ ಬಳಿ ಇಬ್ಬರನ್ನು ಕೊಂದಿದ್ದ ಆನೆ ಸೆರೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2025, 4:04 IST
Last Updated 3 ನವೆಂಬರ್ 2025, 4:04 IST
<div class="paragraphs"><p>ಸೆರೆಯಾದ&nbsp;ಆನೆ</p></div>

ಸೆರೆಯಾದ ಆನೆ

   

ಚಿಕ್ಕಮಗಳೂರು: ಶೃಂಗೇರಿ ತಾಲೂಕಿನ‌ ಕೆರೆಕಟ್ಟೆ ಗ್ರಾಮ ಸಮೀಪ ಕೆರೆಗದ್ದೆ ಗ್ರಾಮದ ಉಮೇಶ್‌ಗೌಡ ಹಾಗೂ ಹರೀಶಶೆಟ್ಟಿ ಅವರನ್ನು ಬಲಿ ಪಡೆದ ಒಂಟಿ ಸಲಗವನ್ನು ಕಾರ್ಕಳ ವನ್ಯಜೀವಿ ವಿಭಾಗದ ಭಗವತಿ ಬಳಿ ಅರಣ್ಯ ಇಲಾಖೆ ಸೆರೆ ಹಿಡಿದಿದೆ.

ಕಾಡಿನಲ್ಲಿ ಸೊಪ್ಪು ತರಲು ಹೋಗಿದ್ದ ಇಬ್ಬರ ಮೇಲೆ ಶುಕ್ರವಾರ ಬೆಳಿಗ್ಗೆ ಆನೆ ದಾಳಿ ನಡೆಸಿತ್ತು. ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದರು. ಕಾಡಾನೆಗಳನ್ನು ಹಿಡಿದು ಸ್ಥಳಾಂತರ ಮಾಡುವಂತೆ ಆಗ್ರಹಿಸಿ ಸ್ಥಳೀಯರು ದಿನವಿಡೀ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದ್ದರು.

ADVERTISEMENT

ದುಬಾರೆ ಮತ್ತು ದೊಡ್ಡಹರವೆ ಆನೆ ಶಿಬಿರಗಳಿಂದ ಐದು ಕುಮ್ಕಿ ಆನೆಗಳನ್ನು ಕರೆಸಲಾಗಿತ್ತು. ಕುದುರೆಮುಖ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ಭಾನುವಾರ ಬೆಳಿಗ್ಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿತ್ತು. ರಾತ್ರಿ ವೇಳೆಗೆ ಸೆರೆ ಸಿಕ್ಕ ಆನೆಯನ್ನು ದೊಡ್ಡಹರವೆ ಆನೆ ಕ್ಯಾಂಪ್‌ಗೆ ಸ್ಥಳಾಂತರ ಮಾಡಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.