ADVERTISEMENT

ಶೃಂಗೇರಿ: ಡಿ.14ರಂದು ನಕ್ಸಲ್ ಪೀಡಿತ ಪ್ರದೇಶಕ್ಕೆ ಪೇಜಾವರ ಶ್ರೀ ಭೇಟಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2024, 15:49 IST
Last Updated 13 ಡಿಸೆಂಬರ್ 2024, 15:49 IST
<div class="paragraphs"><p>(ಸಂಗ್ರಹ ಚಿತ್ರ)</p></div>
   

(ಸಂಗ್ರಹ ಚಿತ್ರ)

ಶೃಂಗೇರಿ: ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ನಕ್ಸಲ್ ಪೀಡಿತ ಪ್ರದೇಶವಾದ ಕೆರೆಗ್ರಾಮ ಪಂಚಾಯಿತಿಯ ಬಾಳಗೆರೆ ಗ್ರಾಮದ ಮುಂಡಗಾರಿಗೆ ಇದೇ 14 (ಶನಿವಾರ) ಭೇಟಿ ನೀಡುವರು.

ಅಲ್ಲಿನ ನಿವಾಸಿಗಳೊಂದಿಗೆ ಸಂವಾದ ನಡೆಸಿರುವ ಅವರು ಸಮಸ್ಯೆ ಆಲಿಸಲಿದ್ದಾರೆ. ಈ ಹಿಂದೆ ದಿ. ವಿಶ್ವೇಶತೀರ್ಥ ಸ್ವಾಮೀಜಿ ಭೇಟಿ ನೀಡಿ ದೇಗುಲದ ಪ್ರತಿಷ್ಠಾಪನೆ, ಕುಂಭಾಭಿಷೇಕ ನೆರವೇರಿಸಿದ್ದರು. ಗಿರಿಜನ ವ್ಯಾಪ್ತಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಅವರ ಶಿಷ್ಯ ವಿಶ್ವಪ್ರಸನ್ನತೀರ್ಥರು ಭೇಟಿ ನೀಡಿ ಜನರೊಂದಿಗೆ ಚರ್ಚೆ ನಡೆಸಲಿದ್ದಾರೆ. ಬೆಳಿಗ್ಗೆ 10ಕ್ಕೆ ಕಾರ್ಯಕ್ರಮ ನಿಗದಿಯಾಗಿದ್ದು, ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ಧಿ ಭಾಗವಹಿಸುವರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.