ಮೂಡಿಗೆರೆ: ತಾಲ್ಲೂಕಿನ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಜಾನಪದ ಕಲಾತಂಡಕ್ಕೆ ರಾಜ್ಯಮಟ್ಟದ ಮಾತೃಭೂಮಿ ಪ್ರಶಸ್ತಿ ಲಭಿಸಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೀದಿ ನಾಟಕ, ಜಾನಪದ ನೃತ್ಯ ರಸ್ತೆ ಪ್ರದರ್ಶನ, ಕೋಲಾಟ, ಮಲೆನಾಡ ಸುಗ್ಗಿ, ಕಂಸಾಳೆ, ಸೋಬಾನೆ ಪದ, ರಾಗಿ ಬೀಸೋ ಪದ, ಜಾನಪದ ಗೀತೆ, ದೀಪದ ನೃತ್ಯ ಸೇರಿದಂತೆ ಹಲವು ಬಗೆಯ ಸಾಂಸ್ಕೃತಿಕ ಕಾರ್ಯಕ್ರಮ ನೀಡುತ್ತಿರುವ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಜಾನಪದ ಕಲಾತಂಡ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಯುವಜನ ಮೇಳದಲ್ಲಿ ಐದು ಬಾರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಸಾಧನೆ ಮಾಡಿದೆ.
ತಂಡದಲ್ಲಿ ಅಧ್ಯಕ್ಷ ಸುರೇಶ್ ಮಗ್ಗಲಮಕ್ಕಿ, ಖಜಾಂಚಿ ರವಿ ಹಂತೂರು, ಗೌರವಾಧ್ಯಕ್ಷ ಮಂಜುನಾಥ್ ಹೇಮಾವತಿ ನಗರ, ಕಾರ್ಯದರ್ಶಿ ರಂಜಿತ್ ಕೋಗಿಲೆ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.