ADVERTISEMENT

ಅರಣ್ಯದೊಳಗೆ ಗಿಡ ನೆಡುವ ಯೋಜನೆ ಕೈಬಿಡಿ: ನವೀನ್ ಕರುವಾನೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 7:11 IST
Last Updated 11 ಫೆಬ್ರುವರಿ 2026, 7:11 IST
ಅರಣ್ಯದೊಳಗೆ ಗಿಡ ನೆಡುವ ಯೋಜನೆ ಕೈಬಿಡುವಂತೆ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ರೈತ ಸಂಘದಿಂದ ಮನವಿ ಸಲ್ಲಿಸಲಾಯಿತು
ಅರಣ್ಯದೊಳಗೆ ಗಿಡ ನೆಡುವ ಯೋಜನೆ ಕೈಬಿಡುವಂತೆ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ರೈತ ಸಂಘದಿಂದ ಮನವಿ ಸಲ್ಲಿಸಲಾಯಿತು   

ಕೊಪ್ಪ: ತಾಲ್ಲೂಕು ಹರಿಹರಪುರ ಹೋಬಳಿ ಬೇರುಕೊಡುಗೆ ಅರಣ್ಯ ವ್ಯಾಪ್ತಿಯ 227ರಲ್ಲಿ ಅರಣ್ಯ ಇಲಾಖೆ ವತಿಯಿಂದ ನೆಡುತೋಪು ಮಾಡಬಾರದು ಎಂದು ಶೃಂಗೇರಿ ಕ್ಷೇತ್ರ ರೈತ ಸಂಘದ ಅಧ್ಯಕ್ಷ ನವೀನ್ ಕರುವಾನೆ ನೇತೃತ್ವದಲ್ಲಿ ಅರಣ್ಯ ಸಂರಕ್ಷಣೆ ಅಧಿಕಾರಿ ಕಚೇರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

‘ನಿತ್ಯ ಹರಿದ್ವರ್ಣ ಕಾಡಿನಲ್ಲಿ ಬಹಳ ದೊಡ್ಡದಾದ ಮರಗಳನ್ನು ಹೊಂದಿವೆ. ಇವುಗಳಿಂದ ರೈತರಿಗೆ ಅನುಕೂಲವಾಗಿದೆ. ಕಾಡಿನ ಮರಗಳ ಕೆಳಗಡೆ ಅರಣ್ಯ ಇಲಾಖೆಯಿಂದ ಗಿಡಗಳನ್ನು ನೆಡುವುದನ್ನು ನಾವು ವಿರೋಧಿಸುತ್ತಿದ್ದೇವೆ. ಆದ್ದರಿಂದ ಗಿಡ ನೆಡುವ ಯೋಜನೆಯನ್ನು ಕೈ ಬಿಟ್ಟು ಪ್ರಾಕೃತಿಕವಾಗಿ ಬೆಳೆದ ಅರಣ್ಯವನ್ನು ಉಳಿಸಿಕೊಳ್ಳಬೇಕು’ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT