ADVERTISEMENT

ಧಮ್ಕಿ ಹಾಕಿದ್ದರೆ ಪ್ರಕರಣ ದಾಖಲಿಸಬೇಕಿತ್ತು: ಸುಧೀರ್ ಮುರೊಳ್ಳಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 6:08 IST
Last Updated 20 ಅಕ್ಟೋಬರ್ 2025, 6:08 IST
ಶಬಾನ ರಂಜಾನ್ ಪಾರ್ಟ್‌ನರ್‌ಶಿಪ್ ಫರ್ಮ್ (ಸಂಸ್ಥೆ)ಯಲ್ಲಿ ನಡೆದ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆ ಪತ್ರವನ್ನು ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ ಕೊಪ್ಪದಲ್ಲಿ ಬಿಡುಗಡೆ ಮಾಡಿದರು
ಶಬಾನ ರಂಜಾನ್ ಪಾರ್ಟ್‌ನರ್‌ಶಿಪ್ ಫರ್ಮ್ (ಸಂಸ್ಥೆ)ಯಲ್ಲಿ ನಡೆದ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆ ಪತ್ರವನ್ನು ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ ಕೊಪ್ಪದಲ್ಲಿ ಬಿಡುಗಡೆ ಮಾಡಿದರು   

ಕೊಪ್ಪ: ‘ನಾನು ಧಮ್ಕಿ ಹಾಕಿದ್ದರೆ ಪ್ರಕರಣ ದಾಖಲಿಸಬೇಕಿತ್ತು. ಇಲ್ಲವೇ ಸಂಬಂಧಿಸಿದ ಇಲಾಖೆ ಎದುರು ಪ್ರತಿಭಟನೆ ನಡೆಸಬೇಕಿತ್ತು’ ಎಂದು ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ ಹೇಳಿದರು.

ಶಬಾನ ರಂಜಾನ್ ಪಾರ್ಟ್‌ನರ್‌ಶಿಪ್ ಫರ್ಮ್ (ಸಂಸ್ಥೆ)ಯಲ್ಲಿ ನಡೆದ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆ ಪತ್ರವನ್ನು ಭಾನುವಾರ ಬಿಡುಗಡೆಗೊಳಿಸಿದ ಅವರು, ‘ನಾನು ಬಿಜೆಪಿ ಕಾರ್ಯಕರ್ತನೊಂದಿಗೆ ಮಾತನಾಡಿದ ಪ್ರತಿ ಪದಕ್ಕೂ ಬದ್ಧನಿದ್ದೇನೆ. ಶಾಸಕ ಟಿ.ಡಿ.ರಾಜೇಗೌಡ ಅವರ ಆಸ್ತಿಗೆ ಸಂಬಂಧಿಸಿದ ದಾಖಲೆ ಪತ್ರದ ಪ್ರದರ್ಶನದ ಬಗ್ಗೆ ನಮ್ಮ ಅಭ್ಯಂತರ ಇಲ್ಲ. ಆದರೆ, ಒಂದು ಪಾರ್ಟ್‌ನರ್‌ಶಿಪ್ ಫರ್ಮ್‌ನೊಳಗೆ ಯಾವ ರೀತಿ ವ್ಯವಹಾರ ನಡೆಯುತ್ತದೆ ಎಂದು ಜೀವರಾಜ್ ಮತ್ತು ಬಿಜೆಪಿಯವರಿಗೆ ಗೊತ್ತಿಲ್ಲ’ ಎಂದರು.

‘ಶಬಾನ ರಂಜಾನ್ ಪಾರ್ಟ್‌ನರ್‌ಶಿಪ್ ಫರ್ಮ್‌ನಲ್ಲಿ ₹ 120 ಕೋಟಿ ಪಾವತಿಯಾಗಿರುವುದು ಟಿ.ಡಿ.ರಾಜೇಗೌಡ, ಡಿ.ಕೆ.ಪುಷ್ಪಾ, ರಾಜ್ ದೇವ್ ಖಾತೆಯಿಂದ ಅಲ್ಲ ಎಂಬುದನ್ನು ಬಿಜೆಪಿಗರು, ಪ್ರಕರಣದ ದೂರುದಾರ ಅರ್ಥ ಮಾಡಿಕೊಳ್ಳಬೇಕು. ದಾಖಲೆ ಕೇಳಿದ್ದಾರೆ. ಅದನ್ನು ಬಿಜೆಪಿ ಮುಖಂಡ ಜೀವರಾಜ್ ಅವರಿಗೆ ಕಳುಹಿಸುತ್ತೇವೆ. ಅವರು ಪರಿಶೀಲಿಸಿ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಲಿ. ಒಂದು ರೂಪಾಯಿ ಹಣ ಏನಾದರೂ ಸಾರ್ವಜನಿಕ ಹಣವನ್ನು ಬಳಸಿದ್ದರೆ, ಶಾಸಕರ ರಾಜೀನಾಮೆ ಕೇಳಲು ಬದ್ಧರಿದ್ದೇವೆ’ ಎಂದು ತಿಳಿಸಿದರು.

ADVERTISEMENT

ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಕ್ಕುಡಿಗೆ ರವೀಂದ್ರ, ಶೃಂಗೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಭಟ್, ಎನ್.ಆರ್.ಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರುಬೈಲ್ ನಟರಾಜ್, ಕೆಪಿಸಿಸಿ ಸದಸ್ಯ ಸದಾಶಿವ, ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಜಿತ್, ಹರಿಹರಪುರ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಮಿತ್ರ, ಕಸಬಾ ಹೋಬಳಿ ಘಟಕದ ಅಧ್ಯಕ್ಷ ಪ್ರಕಾಶ್ ಪೂಜಾರಿ, ಎಪಿಎಂಸಿ ಅಧ್ಯಕ್ಷ ರಾಜೇಂದ್ರ, ಮುಖಂಡರಾದ ಅಸಗೋಡು ನಾಗೇಶ್, ಸುಂದ್ರೇಶ್, ಮಾವಿನಕಟ್ಟೆ ನವೀನ್, ಬಿ.ಕೆ.ನಾರಾಯಣಸ್ವಾಮಿ, ನುಗ್ಗಿ ಮಂಜುನಾಥ್, ಎಂ.ಆರ್.ರವಿಶಂಕರ್, ದುರ್ಗಾಚರಣ್, ವಿಜಯಾನಂದ, ನವೀನ್ ಕರುವಾನೆ, ಅನಿಲ್ ಹೊಸಕೊಪ್ಪ, ವಕೀಲ ರಜಿತ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.