ಆಲ್ದೂರು: ಯಲಗುಡಿಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 12 ದಿನಗಳ ಕಾಲ ನಡೆಯುವ ಬೇಸಿಗೆ ಶಿಬಿರಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಶಿಬಿರದ ಸಂಘಟಕಿ, ಶಿಕ್ಷಕಿ ಗೀತಾ ಕೆ.ಎಚ್ ಮಾತನಾಡಿ, ‘ಗ್ರಾಮೀಣ ವಿದ್ಯಾರ್ಥಿಗಳಿಗೆ ಕಲಿಕೆ ಮತ್ತು ಕೌಶಲ ವೃದ್ಧಿಗೆ ಮಣ್ಣಿನ ಮಾದರಿ ತಯಾರಿಕೆ, ಚಿತ್ರಕಲೆ, ಶ್ಲೋಕ, ರಂಗಗೀತೆ, ಲಾವಣಿ, ಆಟೋಟಗಳು, ಬರವಣಿಗೆ, ಕೈಗಳಿಂದ ಮಾಡುವ ಕುಶಲ ಕಲೆಗಳನ್ನು ಕಲಿಸಲು ಶಿಬಿರ ಯೋಜನೆ ಮಾಡಲಾಗಿದೆ’ ಎಂದರು.
ಸಂಪನ್ಮೂಲ ವ್ಯಕ್ತಿ ನಾಗಶ್ರೀ ತ್ಯಾಗರಾಜ್ ಮಾತನಾಡಿ, ‘ಅಂತರರಾಷ್ಟ್ರೀಯ ಜಾನಪದ ಕಲಾವಿದ ಡಾ. ವಿಜಯಕುಮಾರ್, ಪ್ರಸಿದ್ಧ ಚಿತ್ರಕಲಾ ಶಿಕ್ಷಕ ಸತ್ಯ ಪ್ರಕಾಶ್, ನಾಗರಾಜ್ ವಾಣಿ, ನಾಮದೇವ ಕಾಗದಗಾರ ಭಾಗವಹಿಸಲಿದ್ದಾರೆ. ಸುತ್ತಮುತ್ತಲಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಿಬಿರದ ಲಾಭ ಪಡೆದುಕೊಳ್ಳಬೇಕು’ ಎಂದರು.
ಸತ್ತಿಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಯಲಗುಡಿಗೆ ಹೊನ್ನಪ್ಪ, ‘ವಿದ್ಯಾರ್ಥಿಗಳ ಪ್ರತಿಭೆ ಅನಾವರಕ್ಕೆ ಬೇಸಿಗೆ ಶಿಬಿರ ಉತ್ತಮ ವೇದಿಕೆಯಾಗಿದ್ದು, ಎಲ್ಲ ಸರ್ಕಾರಿ ಶಾಲೆಯಲ್ಲೂ ಬೇಸಿಗೆ ಶಿಬಿರ ಆಯೋಜಿಸುವುದರ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಹಕರಿಸಬೇಕು’ ಎಂದು ಅಭಿಪ್ರಾಯಪಟ್ಟರು.
ಎಸ್.ಡಿ.ಎಂ.ಸಿ ಅಧ್ಯಕ್ಷ ಚಂದ್ರಶೇಖರ್, ಸದಸ್ಯ ವೆಂಕಟೇಶ್, ಹಿರೇಕೊಳಲೆ ಮುಖ್ಯ ಶಿಕ್ಷಕ ಅಣ್ಣನಾಯಕ್, ಹೆಡದಾಳು ಶಾಲೆಯ ಶಿಕ್ಷಕಿ ವಿಮಲಾಕ್ಷಿ, ರೂಪಿಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.